Kannada NewsLatest
ರಾಜಕೀಯ ವೈಷಮ್ಯ; ಸುಲ್ತಾನ್ ಪುರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜಕೀಯ ವೈಷಮ್ಯಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರ ಗ್ರಾಮದಲ್ಲಿ ನಡೆದಿದೆ.
ಶಾನುರ್ ಸಾಬ್ ದಸ್ತಗಿರ್ ಸಾಬ್ ಮುಲ್ಲಾ ಹತ್ಯೆಯಾದ ವ್ಯಕ್ತಿ. ಸುಲ್ತಾನ್ ಪುರ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿತ್ತು. ಫಲಿತಾಂಶದ ವೇಳೆ ಶಾನುರ್ ಸಾಬ್ ಮುಲ್ಲಾ ಪೇನಲ್ ನ 10ಕ್ಕೆ 10 ಅಭ್ಯರ್ಥಿಗಳು ಜಯಗಳಿಸಿದ್ದರು. ಇದರಿಂದ ಕಂಗೆಟ್ಟ ವಿರೋಧಿ ಬಣಗಳು ಶಾನುರ್ ಸಾಬ್ ಮುಲ್ಲಾ ಮನೆ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶಾನುರ್ ಸಾಬ್ ನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶಾನುರ್ ಸಾಬ್ ಇದೀಗ ಮೃತಪಟ್ಟಿದ್ದಾರೆ.




