Latest

ವಂಚನೆ ಪ್ರಕರಣ;ಯುವರಾಜ್ ಸ್ವಾಮಿ ವಿರುದ್ಧ ದಾಖಲಾಯು ಮತ್ತೊಂದು ಎಫ್ ಐಆರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರಲ್ಲಿ ಬಿಲ್ಡರ್ ಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.

ಬಿಲ್ಡರ್ ಇನೀತ್ ಕುಮಾರ್ ಅವರಿಗೆ ಯುವರಾಜ್ ಸ್ವಾಮಿ ವಂಚಿಸಿದ್ದಾರೆ ಎನ್ನಲಾಗಿದೆ. ಇನಿತ್ ಅವರನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಮಾಡೋದಾಗಿ ಹೇಳಿ 30 ಲಕ್ಷ ರೂ ಪಡೆದು ವಂಚಿಸಿದ್ದಾರೆ.

Home add -Advt

ತಾನು ಬಿ.ಎಲ್.ಸಂತೋಷ್ ಅಣ್ಣನ ಮಗ ಎಂದು ಹೇಳಿ ಪರಿಚಯಿಸಿಕೊಂಡಿದ್ದ ಯುವರಾಜ್, ಇನಿತ್ ರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದ. ಅಲ್ಲದೇ ನಿಮ್ಮನ್ನು ರಾಷ್ಟ್ರ ಮಟ್ಟದಲ್ಲಿ ಯೂಥ್ ಐಕಾನ್ ಮಾಡುತ್ತೇವೆ ಎಂದು ನಂಬಿಸಿದ್ದ ಎನ್ನಲಾಗಿದೆ.

ಯುವರಾಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಇನಿತ್ ವಂಚನೆ ಕೇಸ್ ದಾಖಲಿಸಿದ್ದರು. ಇದೀಗ ಯುವರಾಜ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

Related Articles

Back to top button