ಪ್ರಗತಿವಾಹಿನಿ ಸುದ್ದಿ, ಅಂಕೋಲಾ – ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್ ಕಾರು ಅಂಕೋಲಾ ಬಳಿ ಪಲ್ಟಿಯಾಗಿದ್ದು, ಅವರ ಪತ್ನಿ ಹಾಗೂ ಆಪ್ತಸಹಾಯಕ ಮೃತರಾಗಿದ್ದಾರೆ.
ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಈ ಅವಘಡ ಸಂಭವಿದೆ. ಗೋವಾದವರಾಗಿರುವ ಶ್ರೀಪಾದ ನಾಯಕ ಅವರು ಪತ್ನಿಯೊಂದಿಗೆ ತೆರಳುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಗಂಭೀರ ಗಾಯಗೊಂಡಿದ್ದ ಪತ್ನಿ ವಿಜಯಾ ಹಾಗೂ ಆಪ್ತ ಸಹಾಯಕ ದೀಪಕ್ ಸಾವಿಗೀಡಾಗಿದ್ದಾರೆ. ಶ್ರೀಪಾದ ನಾಯಕ ಸಹ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ