Kannada NewsKarnataka NewsLatest

5 ಕೋಟಿ ರೂ. ಕಾಮಗಾರಿ:​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್  ಸನ್ಮಾನ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪ ಗ್ರಾಮದವರೆಗೆ ನೂತನವಾಗಿ ನಿರ್ಮಾಣಗೊಂಡ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.
ಬಸ್ತವಾಡ ಗ್ರಾಮದಲ್ಲಿ ​ಈವರೆಗೆ​ ಸುಮಾರು ​5 ಕೋಟಿ ರೂ​.​ಗಳ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದ್ದು, ಈ ಅಭಿವೃದ್ಧಿ ಕೆಲಸಗಳ​ನ್ನು ಮಾಡಿಸಿದ್ದಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಮ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಪಾಲಿಗೆ ಸಾರ್ಥಕವೆನಿಸಿದೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಹೇಳಿದರು.
 
 ಗ್ರಾಮಸ್ಥರ ಪ್ರೀತಿ, ಪ್ರೋತ್ಸಾಹ ಹಾಗೂ‌ ವಾತ್ಸಲ್ಯಭರಿತ ಸನ್ಮಾನಕ್ಕೆ ಪಾತ್ರ​ವಾಗಿರುವುದು ನನಗೆ ಖುಷಿ ನೀಡಿದೆ. ನಾನು ಇಷ್ಟೊಂದು ವೇಗವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದಕ್ಕೆ ಕ್ಷೇತ್ರದ ಜನರ ನಿರಂತರ ಸಹಕಾರ, ಪ್ರೋತ್ಸಾಹವೇ ಕಾರಣ. ಈ ಅಭಿಮಾನದ ಸನ್ಮಾನ ನಿಜಕ್ಕೂ‌ ನಾನು ಈ‌ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ಸಾರ್ಥಕ ಎನಿಸುತ್ತಿದೆ. ನಿಮ್ಮ ಪ್ರೀತಿ‌, ಪ್ರೋತ್ಸಾಹ, ವಿಶ್ವಾಸಗಳಿಗೆ ಯಾವತ್ತಿಗೂ ನಾನು ಚಿರಋಣಿಯಾಗಿ​ರುತ್ತೇನೆ  ಎಂದು  ಅವರು ಹೇಳಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಅಪ್ಪಯ್ಯ ಬಾಗಣ್ಣವರ, ಮಹಾವೀರ ‌ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮಾನಿಕ್ ಕಾಕಾ, ಮನೋಹರ ಮುಚ್ಚಂಡಿ, ಅಜಿತ ಬಾಗಣ್ಣವರ, ಅರ್ಜುನ ಪಾಟೀಲ, ಮನೋಹರ ಬಾಂಡಗಿ, ಗುಂಡು ಚೌಗುಲೆ, ರಾಜು ಬಡವಣ್ಣವರ, ರಾಮಾ ಕಾಕತ್ಕರ್, ರಾಮಾ ಚೌಗುಲೆ, ಪಾರಿಸ್ ಪಾಟೀಲ, ಶ್ರೀನಿಕ್ ಹಾಗೂ​ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button