Latest

ಮಲಮಗನನ್ನೇ ವಿವಾಹವಾದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: 35 ವರ್ಷದ ಮಹಿಳೆಯೊಬ್ಬಳು ತನ್ನ ಮಲಮಗನನ್ನೇ ವಿವಾಹವಾಗಿ, ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ರಷ್ಯಾದಲ್ಲಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತ: ಮಹಿಳೆ ಘೋಷಿಸಿಕೊಂಡಿದ್ದಾಳೆ. 35 ವರ್ಷದ ಮರೀನಾ ಎಂಬ ಮಹಿಳೆ ತನ್ನ ಮಾಜಿ ಗಂಡನ ಮಗ ವ್ಲಾಡಿಮಿರ್ ಎಂಬಾತನನ್ನು ವಿವಾಹವಾಗಿದ್ದು, ವಿವಾಹದ ಬಳಿಕ ಮಾಜಿ ಗಂಡನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.

Home add -Advt

ಇನ್ನೊಂದು ವಿಚಾರವೆಂದರೆ 10 ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ಮಾಡಿದ್ದ ಮರೀನಾ ಬಳಿಕ ವಿಚ್ಛೇಧನ ನೀಡಿ ಆತನ ಮಗನನ್ನೇ ವರಿಸಿದ್ದಾಳೆ. ವ್ಲಾಡಿಮಿರ್ ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದಾಗ ಆತನ ಜೊತೆ ಪ್ರೇಮಾಂಕುರವಾಗಿದ್ದು, ಇದೀಗ ಇಬ್ಬರೂ ಮದುವೆಯಾಗಿದ್ದಾಗಿ ಮರೀನಾ ತಿಳಿಸಿದ್ದಾಳೆ. ಅಲ್ಲದೇ ವ್ಲಾಡಿಮಿರ್ ನನ್ನು ಆಕರ್ಷಿಸಲು ತಾನು ಪ್ಲಾಸ್ಟಿಕ್ ಸರ್ಜಿರಿ ಮಾಡಿಸಿಕೊಂಡಿದ್ದಾಗಿಯೂ ಹೇಳಿಕೊಂಡಿದ್ದಾಳೆ.

Related Articles

Back to top button