Kannada NewsKarnataka NewsLatest

5 ಕೋಟಿ ರೂ. ಕಾಮಗಾರಿ:​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್  ಸನ್ಮಾನ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪ ಗ್ರಾಮದವರೆಗೆ ನೂತನವಾಗಿ ನಿರ್ಮಾಣಗೊಂಡ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.
ಬಸ್ತವಾಡ ಗ್ರಾಮದಲ್ಲಿ ​ಈವರೆಗೆ​ ಸುಮಾರು ​5 ಕೋಟಿ ರೂ​.​ಗಳ ಅಭಿವೃದ್ಧಿ​ ಕೆಲಸಗಳು ಪೂರ್ಣಗೊಂಡಿದ್ದು, ಈ ಅಭಿವೃದ್ಧಿ ಕೆಲಸಗಳ​ನ್ನು ಮಾಡಿಸಿದ್ದಕ್ಕಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಮ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಪಾಲಿಗೆ ಸಾರ್ಥಕವೆನಿಸಿದೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಹೇಳಿದರು.
 
 ಗ್ರಾಮಸ್ಥರ ಪ್ರೀತಿ, ಪ್ರೋತ್ಸಾಹ ಹಾಗೂ‌ ವಾತ್ಸಲ್ಯಭರಿತ ಸನ್ಮಾನಕ್ಕೆ ಪಾತ್ರ​ವಾಗಿರುವುದು ನನಗೆ ಖುಷಿ ನೀಡಿದೆ. ನಾನು ಇಷ್ಟೊಂದು ವೇಗವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದಕ್ಕೆ ಕ್ಷೇತ್ರದ ಜನರ ನಿರಂತರ ಸಹಕಾರ, ಪ್ರೋತ್ಸಾಹವೇ ಕಾರಣ. ಈ ಅಭಿಮಾನದ ಸನ್ಮಾನ ನಿಜಕ್ಕೂ‌ ನಾನು ಈ‌ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ಸಾರ್ಥಕ ಎನಿಸುತ್ತಿದೆ. ನಿಮ್ಮ ಪ್ರೀತಿ‌, ಪ್ರೋತ್ಸಾಹ, ವಿಶ್ವಾಸಗಳಿಗೆ ಯಾವತ್ತಿಗೂ ನಾನು ಚಿರಋಣಿಯಾಗಿ​ರುತ್ತೇನೆ  ಎಂದು  ಅವರು ಹೇಳಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ​ಮಹಿಳೆಯರು, ಅಪ್ಪಯ್ಯ ಬಾಗಣ್ಣವರ, ಮಹಾವೀರ ‌ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮಾನಿಕ್ ಕಾಕಾ, ಮನೋಹರ ಮುಚ್ಚಂಡಿ, ಅಜಿತ ಬಾಗಣ್ಣವರ, ಅರ್ಜುನ ಪಾಟೀಲ, ಮನೋಹರ ಬಾಂಡಗಿ, ಗುಂಡು ಚೌಗುಲೆ, ರಾಜು ಬಡವಣ್ಣವರ, ರಾಮಾ ಕಾಕತ್ಕರ್, ರಾಮಾ ಚೌಗುಲೆ, ಪಾರಿಸ್ ಪಾಟೀಲ, ಶ್ರೀನಿಕ್ ಹಾಗೂ​ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button