Kannada NewsKarnataka NewsLatest
ರಾಮಮಂದಿರಕ್ಕೆ 5,55,555 ರೂ. ದೇಣಿಗೆ ನೀಡಿದ ಆನಂದ ಮಾಮನಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ 5,55,555 ರೂ. ದೇಣಿಗೆ ನೀಡಿದ್ದಾರೆ.
ಭಾನುವಾರ ಸವದತ್ತಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಈ ದೇಣಿಗೆಯ ಚೆಕ್ ನೀಡಿದರು.
ವಿವಿಧ ಮಠಾಧೀಶರು ಸೇರಿದಂತೆ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ನಿಧಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಗ್ರಾಮಪಂಚಾಯಿತಿಗೆ ಅವಿರೋಧ ಆಯ್ಕೆಯಾದವರಿಗೆ ಶಾಸಕ ಮಾಮನಿಯಿಂದ ಸನ್ಮಾನ


