Kannada NewsLatest

ಮಹಾರಾಷ್ಟ್ರಕ್ಕೆ ಶಾಕ್ ನೀಡಿದ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮಮ್ಾಯಿ ಮಹಾರಾಷ್ಟ್ರಕ್ಕೆ ಹೊಸ ಬಾಂಬ್ ಹಾಕಿದ್ದಾರೆ.

ಬೆಳಗಾವಿಯನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದಿದ್ದ ಅಲ್ಲಿನ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಬೊಮ್ಮಾಯಿ ಖಡಕ್ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದ ಅತೀ ಹೆಚ್ಚು ಕನ್ನಡ ಮಾತನಾಡುವ ಪ್ರದೇಶಗಳಾದ ಸಾಂಗ್ಲಿ, ಸೊಲ್ಲಾಪುರಗಳನ್ನು ಕರ್ನಾಟಕಕ್ಕೆ ಸೇರಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕ ರೀತಿಯಲ್ಲಿ ಮಾತನಾಡುತ್ತಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

ಎಲ್ಲರೂ ಮಹಾಜನ್ ವರದಿಯೇ ಅಂತಿಮ ಎಂದು ಹೇಳುತ್ತಿದ್ದಾರೆ. ಆದರೆ ಮಹಾಜನ್ ವರದಿ ಜಾರಿಗೆ ಬಂದರೂ ಕರ್ನಾಟಕಕ್ಕೆ ನಷ್ಟವೇ. ಹಾಗಾಗಿ ಕರ್ನಾಟಕ ಸಾಂಗ್ಲಿ ಮತ್ತು ಸೊಲ್ಲಾಪುರ ಸೇರಿದಂತೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಕೇಳುವುದೇ ಉತ್ತಮ. ಮಹಾರಾಷ್ಟ್ರಕ್ಕೆ ಇದೇ ತಕ್ಕ ಶಾಸ್ತಿಯಾಗಲಿದೆ.

 

ಬೆಳಗಾವಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಮಹಾ ಸಿಎಂ

ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ

ಉದ್ಧವ್ ಠಾಕ್ರೆ ಉದ್ಧಟತನಕ್ಕೆ ಖಡಕ್ ಉತ್ತರ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ

ಮಹಾರಾಷ್ಟ್ರ ಸಿಎಂ ಅಧಿಕ ಪ್ರಸಂಗತನ ಎಂದ ಸಿದ್ದರಾಮಯ್ಯ

ಅಂದು ಎಂಇಎಸ್ ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ ಇಂದು ಉದ್ಧವ್ ಠಾಕ್ರೆ ಈ ಮಾತು ಹೇಳುತ್ತಿರಲಿಲ್ಲ

ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಭುಗಿಲೆದ್ದ ಪ್ರತಿಭಟನೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button