Latest

ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಹಗರಿಬೊಮ್ಮನಹಳ್ಳಿ – ಪಂಚಮಸಾಲಿ ​ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶನಿವಾರ ಬೆಳಗಾವಿ ಶಾಸಕರೂ, ಕೆಪಿಸಿಸಿ ವಕ್ತಾರರೂ ಆದ ಲಕ್ಷ್ಮಿ ಹೆಬ್ಬಾಳಕರ್ ಪಾಲ್ಗೊಂಡಿದ್ದರು. 
ಧರ್ಮಕ್ಷೇತ್ರ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಯವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಪಂಚಮಸಾಲಿ ಸಮಾಜವನ್ನು  2ಎ ಹಾಗೂ ಲಿಂಗಾಯತ್ ಬಡ ಸಮಾಜಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರ್ಪಡಿಸುವ ಕುರಿತು ಹಕ್ಕೊತ್ತಾಯಿಸಿ ನಾಲ್ಕನೆ ಹಂತದ ಚಳುವಳಿಯಾಗಿ ಈ ಪಾದಯಾತ್ರೆ ನಡಯುತ್ತಿದೆ.
 ಕೂಡಲಸಂಗಮದಿಂದ ಬೆಂಗಳೂರು ವಿಧಾನಸೌಧದ ಆಡಳಿತ ಪೀಠದವರೆಗೆ ಹಮ್ಮಿಕೊಂಡ ಪಂಚಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆ  ಶನಿವಾರ ಹಗರಿಬೊಮ್ಮನಹಳ್ಳಿಯವರೆಗೆ ತಲುಪಿದೆ.
ಶನಿವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡ ಲಕ್ಷ್ಮಿ ಹೆಬ್ಬಾಳಕರ್, ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಲ್ಲದೆ ಶ್ರೀಗಳ ಆಶಿರ್ವಾದ ಪಡೆದರು.
ಜೊತೆಗೆ, ಸಮಾಜದ ಮುಖಂಡರನ್ನು ಭೇಟಿಯಾ​ಗಿ​ ಸಮಾಜದ ಏ​ಳ್ಗೆಗಾಗಿ ಹಾಗೂ ಮುಂಬರುವ​ ಹೋರಾಟದ​ ರೂಪರೇಷೆಗಳ ಕುರಿತು​ ಸಹ​ ಚರ್ಚಿಸಿದ​ರು​.
 ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ನಡೆದ ಪ್ರತಿಭಟನಾ ಧರಣಿಯಲ್ಲೂ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಪಾಲ್ಗೊಂಡು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button