Kannada NewsKarnataka NewsLatest

ಸಮುದಾಯದ ಕೆಲಸಗಳನ್ನು ಮಾಡಿಕೊಟ್ಟಾಗ ಜೀವನದಲ್ಲಿ ನೆಮ್ಮದಿ – ಲಕ್ಷ್ಮಿ ಹೆಬ್ಬಾಳಕರ್   

ಪ್ರಗತಿವಾಹಿನಿ ಸುದ್ದಿ, ​ ಬೆಳಗಾವಿ – ಕ್ಷೇತ್ರದ ಜನರು ಮತ್ತು ದೇವರ ಆಶಿರ್ವಾದದಿಂದಾಗಿ ನಾನು ಶಾಸಕಿಯಾಗಿ ಕ್ಷೇತ್ರದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಜನರ ಸ್ಫೂರ್ತಿಯೇ ಕಾರಣ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ನಿರ್ಮಾಣದ ಹಂತದಲ್ಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಕಾಮಗಾರಿಗಳಿಗೆ  ಪೂಜಾ ವಿಧಿ ವಿಧಾನಗಳ ಮೂಲಕ ಚಾಲನೆಯನ್ನು ನೀಡಿ​ ಅವರು ಮಾತನಾಡಿದರು.
​ಪ್ರತಿ ಗ್ರಾಮದ ಜನರು ತಮ್ಮ ಸ್ವಾರ್ಥಗಳನ್ನೆಲ್ಲ ಬದಿಗಿಟ್ಟು ಗ್ರಾಮಕ್ಕೊಂದು ದೇವಸ್ಥಾನ, ಸಮುದಾಯಭವನ, ರಸ್ತೆ, ಶಾಲೆಯಂತಹ ಸಾಮೂಹಿಕ ಕೆಲಸಗಳನ್ನು ಕೇಳುತ್ತಿದ್ದಾರೆ. ​ಇದು ನನಗೆ ತುಂಬಾ ಖುಷಿ ಕೊಡುವ ಸಂಗತಿ. ಸಮುದಾಯದ ಕೆಲಸಗಳನ್ನು ಮಾಡಿಕೊಟ್ಟಾಗ ನನಗೂ ನೆಮ್ಮದಿ ಸಿಗುತ್ತದೆ. ಇಂತಹ ಒಳ್ಳೆಯ ಜನರಿರುವ ಕ್ಷೇತ್ರದ ಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೆಬ್ಬಾಳಕರ್ ಹೇಳಿದರು.​
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ನಾಗೇಶ ದೇಸಾಯಿ, ಈರಪ್ಪ ಸುಳೇಭಾವಿ, ಬಸು ದೇಸಾಯಿ, ಸಂಜಯ ಕಾಮತ್, ಗುರುನಾಥ ಅಸ್ಟೆಕರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ​ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button