Latest

ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಾಟ; ಪ್ರಕರಣದ ಹಿಂದೆ ಖ್ಯಾತ ನಟನ ಕೈವಾಡ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ ಪ್ರಕರಣದ ಹಿಂದೆ ಪಂಜಾಬ್ ನ ಖ್ಯಾತ ನಟ, ಬಿಜೆಪಿ ಬೆಂಬಲಿಗ ದೀಪ್ ಸಿಧು ಕೈವಾಡವಿದೆ ಎಂಬ ಮಾತು ಕೇಳಿಬಂದಿದೆ.

ನಟ ದೀಪ್ ಸಿಧು, ಗುರುದಾಸ್ ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಪರ ಲೋಕಸಭಾ ಚುನಾವಣೆ ವೇಳೆ ಪ್ರಚಾರ ನಡೆಸಿದ್ದರು. ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ ಪ್ರಕರಣದ ನೇತೃತ್ವ ವಹಿಸಿದ್ದೇ ದೀಪ್ ಸಿಧು ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ. ದೀಪ್ ಸಿಧು ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಅಲ್ಲಿ ಭಾಗಿಯಗೈದ್ದರು. ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ, ದೀಪ್ ನಡವಳಿಕೆ ಗಮನಿಸಿದ್ದರು. ಹೀಗಗೈ ದೀಪ್ ನನ್ನು ಧರಣಿಯಿಂದ ಹೊರಗಿಟ್ಟಿದ್ದರು.

Home add -Advt

ದೀಪ್ ಸಿಧು ವಿರುದ್ಧ ತನಿಖೆಗೆ ರೈತ ಸಂಘಟನೆಗಳು ಆಗ್ರಹಿಸಿವೆ. ಪ್ರಕರಣದ ಹಿಂದೆ ದೀಪ್ ಸಿಧು ಕೈವಾಡ ವಿಚಾರ ಹೊರಬಂದ ಬೆನ್ನಲ್ಲೇ ಪ್ರಧಾನಿ ಮೋದಿ, ಅಮಿತ್ ಶಾ ಜತೆ ದೀಪ್ ಸಿಧು ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

 

Related Articles

Back to top button