ಪ್ರಗತಿವಾಹಿನಿ ಸುದ್ದಿ; ಮುಂಬೈ; ಗಡಿ ವಿಚಾರವಾಗಿ ಒಂದರ ಮೇಲೊಂದರಂತೆ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಈಗ 50 ವರ್ಷಗಳ ಹಿಂದಿನ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಎ ಕೇಸ್ ಫಾರ್ ಜಸ್ಟೀಸ್ ಎಂಬ ಹೆಸರಿನ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಈ ಮೂಲಕ ಬೆಳಗಾವಿ, ಕಾರವಾರ, ಬೀದರ್ ಭಾಗಗಳು ಮರಾಠಿ ಭಾಷಿಕರದ್ದು ಎಂದು ಹೇಳಲು ಹೊರಟಿದೆ.
ಈ ಸಾಕ್ಷ್ಯಚಿತ್ರದಲ್ಲಿ ಬೆಳಗಾವಿಯಲ್ಲಿ 1890 ರಲ್ಲಿ ನಿರ್ಮಾಣವಾದ ಸೇತುವೆ ಮೇಲೆ ಮರಾಠಿ ನಾಮಫಲಕ ಇರುವ ದೃಶ್ಯ, ಕಾರವಾರದ ಗ್ರಾಮವೊಂದರಲ್ಲಿ ಇಂಗ್ಲೀಷ್, ಕೊಂಕಣಿ, ಮರಾಠಿ ಭಾಷೆಯ ಬೋಧನೆ ಚಿತ್ರಣ, ಎನ್ ಸಿಸಿ ಬಟಾಲಿಯನ್ ನಲ್ಲಿ ಮರಾಠಿ ಬೋರ್ಡ್, ಮರಾಠಿ ಪತ್ರಿಕೆಯಲ್ಲಿ 1912ರಲ್ಲಿ ಕಾರವಾರ ಸಹಕಾರಿ ಬ್ಯಾಂಕ್ ನ ಸುದ್ದಿ ಪ್ರಸಾರ ಸೇರಿದಂತೆ ಹಲವು ವಿಚಾರಗಳಿವೆ.
ಒಟ್ಟಾರೆ ಗಡಿ ವಿಚಾರವಾಗಿ ಇತ್ತೀಚೆಗೆ ಟ್ವೀಟ್ ಮೂಲಕ, ಪುಸ್ತಕ ಬಿಡುಗಡೆ ಮೂಲಕ ವಿವಾದ ಸೃಷ್ಟಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ 50 ವರ್ಶಗಳ ಹಳೆಯ ವಿಡಿಯೋ ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸುವ ಮೂಲಕ ಗಡಿ ಜಿಲ್ಲೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಬಸ್ ಗಳ ಮೇಲೆ ಮರಾಠಿ ಪೋಸ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ