ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 13ನೇ ಆವೃತ್ತಿಯ ಏರೋ ಇಂಡಿಯಾ-2021 ಏರ್ ಶೋ ಎರಡನೇ ದಿನವಾದ ಇಂದು ಕೂಡ ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿತ್ತು. ಮಧ್ಯಾಹ್ನ 12 ಗಂಟೆಯವರೆಗೂ 42 ವಿಮಾನಗಳು ಹಾಗೂ ಹೆಲಿಕ್ಯಾಪ್ಟರ್ ಗಳು ಶಕ್ತಿ ಪ್ರದರ್ಶನ ನೀಡಿದವು.
ಈ ಬಾರಿ ಕೇವಲ ಮೂರು ದಿನಗಳು ಮಾತ್ರ ಏರ್ ಶೋ ಆಯೋಜನೆ ಮಾಡಲಾಗಿದ್ದು, ಅತಿ ಕಡಿಮೆ ದೇಶಗಳು ಭಾಗಿಯಾಗಿದ್ದು, ಯಾವುದೇ ಹೊಸ ವಿಮಾನಗಳು ಭಾಗಿಯಾಗಿಲ್ಲ ಎನ್ನಲಾಗಿದೆ. ಹೆಚ್ಎಎಲ್ ನಿರ್ಮಿತ ದೇಶೀಯ ತೇಜಸ್ ಲಘು ಯುದ್ಧ ವಿಮಾನ, ಸೂರ್ಯ ಕಿರಣ್ ಯುದ್ಧ ವಿಮಾನದ ವೈಮಾನಿಕ ಪ್ರದರ್ಶನ ನೋಡುಗರ ಮನಸೂರೆಗೊಂಡಿತು.
ಏರೋ ಇಂಡಿಯಾ-2021ರಲ್ಲಿ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಲೋಹದ ಹಕ್ಕಿಗಳ ಝಲಕ್ ಇಲ್ಲಿದೆ….
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ