Kannada NewsKarnataka News

ನಿವೃತ್ತ ಶಿಕ್ಷಕ ವಸಂತ ಕಟ್ಟಿಗೆ ಸತ್ಕಾರ, ಬೀಳ್ಕೊಡುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕವಾಡಿ ಕ್ಲಸ್ಟರ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿತೈಷಿ ಹಾಗೂ ಮಾಜಿ ನಗರಸೇವಕಿ ಶೀಲಾ ದೇಶಪಾಂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಶಾಲೆಯಿಂದ ಇಬ್ಬರು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲೇ ಕಟ್ಟಿ ಗುರುಗಳು ನಿವೃತ್ತರಾಗಿದ್ದಾರೆ. ವಯೋಸಹಜವಾಗಿ ನಿವೃತ್ತರಾಗುವುದು ಅನಿವಾರ್ಯ. ಆದರೆ ಆ ಸ್ಥಾನಗಳನ್ನು ಇಲಾಖೆ ಬೇಗ ಭರ್ತಿ ಮಾಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗುತ್ತದೆ ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಕೃಷ್ಣಾ ರಾಚಣ್ಣವರ, ನಗರ ಘಟಕದ ಅಧ್ಯಕ್ಷ ಬಾಬು ಸೊಗಲಣ್ಣವರ ಶಿಕ್ಷಕ ವಸಂತ ಕಟ್ಟಿಯವರ ಸುದೀರ್ಘ 30 ವರ್ಷಗಳ ಸೇವೆಯನ್ನು ಸ್ಮರಿಸುತ್ತ, ಅವರ ನಿವೃತ್ತಿ ಜೀವನ ಸುಖಮವಾಗಿರಲಿ, ದೇವರು ಅವರಿಗೆ ಇನ್ನೂ ಹೆಚ್ಚು ಸಮಾಜ ಸೇವೆ ಮಾಡುವಂತಹ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
 ಟಿಳಕವಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ  ವ್ಯಕ್ತಿ ಗಿರೀಶ ಜಗಜಂಪಿ ಮಾತನಾಡಿ, ನನಗಿಂತ ಮುನ್ನ ಸಿ ಆರ್ ಪಿ ಯಾಗಿದ್ದ ಹಿರಿಯ ಶಿಕ್ಷಕ ವಸಂತ ಕಟ್ಟಿಯವರ ಮಾರ್ಗದರ್ಶನ ನಮಗೆ ಸಿಗುತಿತ್ತು. ಇನ್ನು ಮುಂದೆ ಕೂಡ ಅವರ ಮಾರ್ಗದರ್ಶನ ನಮಗೆಲ್ಲ ಸಿಗುತ್ತಿರಲಿ. ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.
 ಸತ್ಕಾರ ಸ್ವೀಕರಿಸಿದ ವಸಂತ ಕಟ್ಟಿ, ನಿಮ್ಮ ಪ್ರೀತಿ, ಅಭಿಮಾನದ ಸತ್ಕಾರಕ್ಕೆ ನಾನು ಋಣಿಯಾಗಿರುವೆ. ನನ್ನ ಸೇವಾವಧಿಯಲ್ಲಿ ನನಗೆ ಸಹಕಾರ, ಸಹಾಯ ನೀಡಿದ ಎಲ್ಲ ಶಿಕ್ಷಕ – ಶಿಕ್ಷಕಿಯರಿಗೂ, ಅಧಿಕಾರಿ ವರ್ಗಕ್ಕೂ ಧನ್ಯವಾದಗಳು ಎಂದು ಹೇಳಿ ಶಾಲೆಗೆ ದೇಣಿಗೆಯಾಗಿ ಅಲ್ಮೆರಾವೊಂದನ್ನು ನೀಡುವುದಾಗಿ ಹೇಳಿದರು.
ಅದೃಶ್ಯ ಹೈಬತ್ತಿ,  ಸುರೇಶ ನಾವಲಗಿ, ರಾಜು ಕೋಲಕಾರ, ಶಿವಾನಂದ ರೋಡಬಸಣ್ಣವರ, ರಾಜು ಬಚನಟ್ಟಿ, ಎಂ  ಎಸ್ ಶಿವಪೂಜಿಮಠ, ಸಿದ್ದಾರ್ಥ  ಕೆಳಗೇರಿ, ಕುಮಾರ ಚರಂತಿಮಠ,  ಬಿ ಬಿ  ಹೆಗಡೆ, ನಂದೀಶ ಕಾಗತಿಕರ, ಜಯಶ್ರೀ ಪಾಟೀಲ, ಶೋಭಾ ಪೂಜಾರ, ಸುಮಿತ್ರಾ ಯಡವಣ್ಣವರ, ಅಂಜನಾ ಜೋಶಿ,   ಲೀಲಾವತಿ ಹೊಸಮನಿ, ಶುಭಾ ಭಟ್, ನಿವೃತ್ತ ಮುಖ್ಯಾಧ್ಯಾಪಕ ಅಶೋಕ ಆಯಾಚಿತ, ನಿವೃತ್ತ ಶಿಕ್ಷಕ ವಸಂತ ಅಂಗಡಿ, ಆರ್ ಎಸ್ ಬಸನಾಯ್ಕ,  ಟಿಳಕವಾಡಿ ಕ್ಲಸ್ಟರ್ನ ಎಲ್ಲ ಶಾಲೆಯ ಪ್ರಧಾನ ಗುರುಗಳು, ಸಹಶಿಕ್ಷಕರು, ಮಂಜುಳಾ ಖಂಡೋಜಿ, ನೀತಾ ಗವಳಿ ಹಾಜರಿದ್ದು ಶುಭ ಹಾರೈಸಿದರು.
ಶಿಕ್ಷಕ ಮಹಾದೇವ ಮಾನೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರಿ ಮುಖ್ಯ ಶಿಕ್ಷಕ ವೀರಭದ್ರಯ್ಯ ಬೇವಿನಕೊಪ್ಪಮಠ ಸರ್ವರನ್ನು ಸ್ವಾಗತಿಸಿದರು. ರಾಧಿಕಾ ಮಿರ್ಜಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button