Latest

5 ರೂ.ನೋಟು ನಿರಾಕರಿಸಿದ ಕಂಡಕ್ಟರ್ ಗೆ ಸಾವಿರ ರೂ ದಂಡ

ಪ್ರಗತಿವಾಹಿನಿ ಸುದ್ದಿ, ಅರಸಿಕೆರೆ – ಪ್ರಯಾಣಿಕರೊಬ್ಬರಿಂದ 5 ರೂ. ನೋಟು ಸ್ವೀಕರಿಸಲು ನಿರಕರಿಸಿದ ಕಂಡಕ್ಟರ್ ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಂದು ಸಾವಿರ ರೂ. ದಂಡ ವಿಧಿಸಿದೆ.

ಸೋಮಶೇಖರ ಎನ್ನುವವರು ಅರಸಿಕೆರೆಯಿಂದ ತಿಪಟೂರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. 35 ರೀ. ಟಿಕೆಟ್ ಗೆ 10 ರೂ.ಗಳ 3 ನೋಟು ಮತ್ತು 5 ರೂ.ಗಳಒಂದು ನೋಟನ್ನು ಅವರು ನೀಡಿದರು.

Home add -Advt

ಆದರೆ 5 ರೂ. ನೋಟನ್ನು ನಿರಾಕರಿಸಿದ ಕಂಡಕ್ಟರ್ ಗಲಾಟೆ ಮಾಡಿ ಪ್ರಯಾಣಿಕನನ್ನು ಬಸ್ ನಿಂದ ಕೆಳಗಿಳಿಸಲು ಮುಂದಾಗಿದ್ದ. ತಕ್ಷಣ ಸೋಮಶೇಖರ್ ತಿಪಟೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು 5 ರೂ ನೋಟು ಸ್ವೀಕರಿಸುವಂತೆ ಕಂಡಕ್ಟರ್ ಗೆ ತಾಖೀತು ಮಾಡಿ ಕಳಿಸಿದ್ದರು.

ಇದರಿಂದ ಅವಮಾನಗೊಂಡ ಸೋಮಶೇಖರ್ ರಸ್ತೆ ಸಾರಿಗೆ ಸಂಸ್ಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಅವರು ವಿಚಾರಣೆ ನಡೆಸಿ ಕಂಡಕ್ಟರ್ ಗೆ ಒಂದು ಸಾವಿರ ರೂ. ದಂಡ ವಿಧಿಸಿದ್ದಾರೆ.

Related Articles

Back to top button