Kannada NewsLatest

ವಿಶ್ವದ ಮೊದಲ ಚಾಲಕ ರಹಿತ ಎಲೆಕ್ಟ್ರಿಕ್ ಸ್ಮಾರ್ಟ್ ಟ್ರ್ಯಾಕ್ಟರ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ವಿಶ್ವದ ಪ್ರಥಮ ವಿದ್ಯುದೀಕೃತ, ಸ್ಮಾರ್ಟ್ ಟ್ರ್ಯಾಕ್ಟರ್ ನ್ನು ಅಮೆರಿಕದಲ್ಲಿ ಮೊನಾರ್ಕ್ ಟ್ರ್ಯಾಕ್ಟರ್ ಬಿಡುಗಡೆಗೊಳಿಸಿದೆ. ಕೃಷಿ ವಲಯಕ್ಕೆ ನವೀನ ಉತ್ಪನ್ನಗಳನ್ನು ಮತ್ತು ಪರಿಹಾರಗಳನ್ನು ಒದಗಿಸುವ ವಿ ಎಸ್ ಟಿ ಟಿಲ್ಲರ್ಸ್ ಟ್ರ್ಯಾಕ್ಟರ್ಸ್ ಸಂಸ್ಥೆ, ಮೊನಾರ್ಕ್ ಟ್ರ್ಯಾಕ್ಟರ್ಸ್ ಜತೆಗೆ ತಾಂತ್ರಿಕ ಸಹಭಾಗಿತ್ವವನ್ನು ಘೋಷಿಸಿದೆ. ಎರಡು ಕಂಪನಿಗಳು ಗ್ರಾಹಕರಿಗೆ ಕಾಂಪ್ಯಾಕ್ಟ್ ಟ್ರ್ಯಾಕ್ಟರ್ ಗಳ ಮೂಲಕ ಗ್ರಾಹಕರ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಿದೆ.

ಇದು ಒಂದು ಸಂಪೂರ್ಣ ವಿದ್ಯುದೀಕೃತ ಮತ್ತು ಸ್ವಯಂ ಚಾಲಿತ ಟ್ರ್ಯಾಕ್ಟರ್. ಇದನ್ನು ಚಾಲಕ ಸಹಿತ ಹಾಗೂ ಚಾಲಕ ರಹಿತವಾಗಿ ಚಲಾಯಿಸಬಹುದಾಗಿದೆ. ನಿರ್ವಾಹಕರಿಲ್ಲದೆ ಪೂರ್ವ ನಿಯೋಜಿತ ಕೆಲಸಗಳನ್ನು ನಡೆಸಬಲ್ಲದು ಮತ್ತು ಕೆಲಸಗಾರರ ಸನ್ನೆ ಮತ್ತು ಅನುಸರಣೆ ವಿಧಾನಗಳಿಂದ ಕೆಲಸಗಾರರಿಗೆ ಅನುಕೂಲ ಮಾಡಿಕೊಡಲಿದೆ.

ಅಪಘಾತಗಳನ್ನು ತಪ್ಪಿಸಲು ಟ್ರಾಕ್ಟರ್ ನಲ್ಲಿ 360 ಡಿಗ್ರಿ ಕ್ಯಾಮರಾವಿದ್ದು, ಅದು ಬೀಳುವುದು ಮತ್ತು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮತ್ತು ಸುರಕ್ಷತೆಗಾಗಿ ಪವರ್ ಟೇಕ್ ಆಫ್ ತಂತ್ರಜ್ಞಾನ ಅಳವಡಿಸಲಾಗಿದೆ.

ಬಳಕೆದಾರರು ಟ್ರ್ಯಾಕ್ಟರ್ ನ್ನು ತಮ್ಮ ಸ್ಮಾರ್ಟ್ ಫೋನ್ ಗೆ ಅಥವಾ ಇತರ ಸಾಧನಕ್ಕೆ ಜೋಡಿಸಿ ಟ್ರ್ಯಾಕ್ಟರ್ ಸ್ಥಿತಿಗತಿ ಸುತ್ತಮುತ್ತಲಿನ ಹವಾಮಾನ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಟ್ರ್ಯಾಕ್ಟರ್ ನ ಕಾರ್ಯನಿರ್ವಹಣೆ, ದತ್ತಾಂಶ ಸಂಗ್ರಹಣೆ ವರದಿ ಪಡೆಯಬಹುದು. ಸಣ್ಣ ಮಟ್ಟದ ರೈತರ ಕೃಷಿ ಉತ್ಪಾದನೆಗಳನ್ನು ಹೆಚ್ಚಿಸಲು ಸಹಾಯವಾಗುವ ರೀತಿಯಲ್ಲಿ ಇ-ಟ್ರ್ಯಾಕ್ಟರ್ ಪರಿಕಲ್ಪನೆಯನ್ನು ವಿನ್ಯಾಸಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button