ಪ್ರಗತಿವಾಹಿನಿ ಸುದ್ದಿ:ಬೆಳಗಾವಿ; ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಆತ್ಮೀಯರೊಬ್ಬರ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಬೆಳಗಾವಿ ನಗರದ ಸದಾಶಿವ ಸ್ಮಶಾನದಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರದ ನ್ಯಾಯವಾದಿ ವಿಕ್ರಂ ಕರನಿಂಗ ಅವರ ಹೊಸ ಕಾರಿಗೆ ಸತೀಶ್ ಜಾರಕಿಹೊಳಿ ಚಾಲನೆ ನಿಡಿದರು.
ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮ ಜನರು ಸ್ಮಶಾನ ಎಂದರೆ ಭಯ ಬೀಳುತ್ತಾರೆ. ಆದರೆ ಸ್ಮಶಾನ ಎಂದರೆ ಅದು ಒಂದು ಪವಿತ್ರ ಸ್ಥಳ. ಜನರಲ್ಲಿನ ಮೌಢ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಸ್ಮಶಾನದಲ್ಲಿ ವಾಹನಕ್ಕೆ ಚಾಲನೆ ಪಡೆದುಕೊಂಡಿದ್ದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಪ್ರತಿದಿನ ದೇಶದಲ್ಲಿ ಅಪಘಾತದಲ್ಲಿ ಸಾವನ್ನಪ್ಪುವ 600 ಜನರು ವಾಹನಗಳಿಗೆ ಪೂಜೆ ಮಾಡಿಸಿದವರೇ ಆಗಿದ್ದಾರೆ. ದೇವರಿಗೆ ಹೋಗುವಾಗ, ಬರುವಾಗ ಕೂಡ ಸಾಕಷ್ಟು ಅಪಘಾತಗಳು ಸಂಭವಿಸಿ ಸಾಕಷ್ಟು ಜನರು ಸಾವನ್ನಪ್ಪುತ್ತಾರೆ. ಸಾವು ಬಂದಾಗ ಯಾವುದೋ ಒಂದು ರೀತಿಯಲ್ಲಿ ಸಾಯುತ್ತಾರೆ ಆದರೆ ಈ ರೀತಿ ಮನುವಾದಿಗಳಿಗೆ ಹೆದರಿಕೊಂಡು ನಾವು ಜೀವಿಸಲಾಗುವುದಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ