ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಇಂದಿನ ಯುವಕರಿಗೆ ಪ್ರೇರಣೆ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಶುಕ್ರವಾರ ಸಂಜೆ ಬಸ್ತವಾಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿವಾಜಿಯ ದೂರದೃಷ್ಟಿ, ಸಮಾಜದ ಸಂಘಟನೆಯ ರೀತಿ, ನಾಯಕತ್ವ ಗುಣ, ಪರಾಕ್ರಮ ಇವೆಲ್ಲ ನಮಗೆ ಆದರ್ಶವಾಗಿ ನಿಲ್ಲುತ್ತವೆ. ಯುವಕರು ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಸಾಗಿದಾಗ ಆದರ್ಶ ಸಮಾಜ ನಿರ್ಮಾಣವಾಗುತ್ತದೆ ಎಂದರು ಚನ್ನರಾಜ.
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕೇಶವ ಚೌಗುಲೆ, ಮನೋಹರ ಬಾಂಡಗೆ, ಗುಂಡು ಚೌಗುಲೆ, ಈರಪ್ಪ ಚೌಗುಲೆ, ಬರ್ಮಾ, ಅರ್ಜುನ ಪಾಟೀಲ, ರಾಮಾ ಕಾಕತ್ಕರ್, ಜ್ಯೋತಿಬಾ ಚೌಗುಲೆ, ಬಾಳು ಚೌಗುಲೆ, ಸಹದೇವ ಬಾಂಡಗೆ, ಸುರೇಶ ಬಾಂಡಗೆ, ಯಲ್ಲಪ್ಪ ಬಾಂಡಗೆ, ಮಲ್ಲಪ್ಪ ದೊಡ್ಡಕಲ್ಲಣ್ಣವರ, ಪದ್ಮರಾಜ ಪಾಟೀಲ ಹಾಗೂ ಮಹಿಳಾ ಮಂಡಳದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ