ಪ್ರಗತಿವಾಹಿನಿ ಸುದ್ದಿ; ಇಸ್ರೇಲ್: 17 ಮೀಟರ್ ಉದ್ದದ ಫಿನ್ ತಿಮಿಂಗಿಲ ದಕ್ಷಿಣ ಇಸ್ರೇಲ್ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದೆ. ಈ ಮೀನಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸುಮಾರು 25 ಟನ್ ತೂಕದ ತಿಮಿಂಗಿಲ ನಿಟ್ಜಾನಿಮ್ ಪ್ರಕೃತಿ ಮೀಸಲು ಪ್ರದೇಶದ ಕಡಲತೀರದಲ್ಲಿ ಮೃತಪಟ್ಟಿದೆ. ಕಡಲಿನ ಮಾಲಿನ್ಯದಿಂದ ತಿಮಿಂಗಿಲ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಫಿನ್ ವೇಲ್ ನೀಲಿ ತಿಮಿಂಗಿಲ ವಿಶ್ವದ ಎರಡನೇ ಅತಿದೊಡ್ದ ಸಸ್ತನಿ ಜಾತಿಗೆ ಸೇರಿದ್ದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ