ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿ ದೂರು ನೀಡಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ಕೇಸ್ ವಾಪಸ್ ಪಡೆದುಕೊಂಡಿದ್ದು, ಮಾಜಿ ಸಿಎಂ ಹೆಚ್.ಡಿ.ಕೆ ಹೇಳಿಕೆಗೆ ಬೇಸತ್ತು ಕೇಸ್ ವಾಪಸ್ ಪಡೆದಿದ್ದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ನಾನು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದವನು. ಆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಈ ಪ್ರಕರಣದಲ್ಲಿ ನಾನು 5 ಕೋಟಿ ಡೀಲ್ ಮಾಡಿರುವುದಾಗಿ ಆರೋಪಿಸಿದ್ದಾರೆ. ಇದರಿಂದಾಗಿ ಜನರು ಮಾತ್ರವಲ್ಲ ನನ್ನ ಕುಟುಂಬದವರು ಕೂಡ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ನಾನು ಹೊಗಡೆ ಓಡಾಡಲು ಆಗುತ್ತಿಲ್ಲ. ಇದರಿಂದ ಬೇಸರಗೊಂಡು ನಾನು ಕೇಸ್ ವಾಪಸ್ ಪಡೆಯುತ್ತಿದ್ದೇನೆ ಎಂದರು.
ಇನ್ನು ಜನರ ಬಾಯಲ್ಲಿ ಸಂತ್ರಸ್ತ ಯುವತಿ ಇಂದು ಅಪರಾಧಿಯಾಗಿದ್ದಾರೆ. ದೂರು ಕೊಟ್ಟವರನ್ನೇ ತಪ್ಪಿತಸ್ಥರೆಂದು ನೋಡುತ್ತಿದ್ದಾರೆ. ಹೆಚ್.ಡಿ.ಕೆ ಆರೋಪ ಆಧಾರ ರಹಿತವಾದ ಆರೋಪ. ಈ ಎಲ್ಲಾ ಕಾರಣದಿಂದ ಬೇಸರವಾಗಿ ನಾನು ಕೇಸ್ ವಾಪಸ್ ಪಡೆಯುತಿದ್ದೇನೆ ಎಂದು ಹೇಳಿದರು.
Big Breaking – ರಮೇಶ ಜಾರಕಿಹೊಳಿ ವಿರುದ್ಧ ದಾಖಲಿಸಿದ್ದ ಕೇಸ್ ವಾಪಸ್
ಜಾರಕಿಹೊಳಿ ವಿರುದ್ಧದ ಕೇಸ್ ತಕ್ಷಣ ವಾಪಸ್ ಪಡೆಯಲು ಆಗಲ್ಲ ಎನ್ನುತ್ತಿರುವ ಪೊಲೀಸರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ