ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಗಾವಿ ರಿಂಗ್ ರಸ್ತೆ ಕಾಮಗಾರಿಗೆ ಬಜೆಟ್ ನಲ್ಲಿ 140 ಕೋಟಿ ರೂ. ಮೀಸಲಿಡಲಾಗಿದೆ.
ಸುಮಾರು 69 ಕಿಮೀ ಉದ್ದದ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಅನೇಕ ವರ್ಷಗಳ ಬೇಡಿಕೆಯಾಗಿದ್ದು, ಈ ಬಾರಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರು ಈ ಕುರಿತು ವಿಶೇಷ ಪ್ರಯತ್ನ ಮಾಡಿದ್ದರು. ಕೆಲವು ದಿನಗಳ ಹಿಂದೆ ಈ ಕುರಿತು ಅಭಯ ಪಾಟೀಲ ಭರವಸೆ ನೀಡಿದ್ದರು.
ಭೂ ಸ್ವಾಧೀನ ವೆಚ್ಚವೂ ಸೇರಿದಂತೆ ಮೊದಲ ಹಂತದಲ್ಲಿ 140 ಕೋಟಿ ರೂ. ಮಂಜೂರಾದಂತಾಗಿದೆ.
ನಿಪ್ಪಾಣಿ ಬಳಿ ಕೊಲ್ಲಾಪುರ ಚಪ್ಪಲಿ ತಯಾರಿಕಾ ಘಟಕ ಮಂಜೂರಾಗಿದೆ.
ಈ ಬಜೆಟ್ ನಲ್ಲಿ ಬೆಳಗಾವಿ ರಿಂಗ್ ರೋಡ್ ಖಚಿತ – ಅಭಯ ಪಾಟೀಲ
ಬೆಳಗಾವಿ ರಿಂಗ್ ರಸ್ತೆ ಭೂ ಸ್ವಾಧೀನಕ್ಕೆ ಶೇ.50ರಷ್ಟು ಪಾಲನ್ನು ನೀಡಲು ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ