ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ.
ಜಿಲ್ಲಾಧಿಕಾರಿ ನಿಷೇಧಾಜ್ನೆ ಆದೇಶ ಹೊರತುಪಡಿಸಿಯೂ ಕನ್ನಡಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಎಂಇಎಸ್ ಪ್ರತಿಭಟನೆ ನಡೆಸಿದೆ. ಎಂಇಎಸ್ ಪುಂಡಾಟ ಬೆನ್ನಲ್ಲೇ ಬೆಳಗಾವಿ ನಗರಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ತೀವ್ರ ಬಂದೋಬಸ್ತ್ ವಹಿಸಲಾಗಿದೆ. ಡಿಸಿಪಿ ವಿಕ್ರಂ ಅಮ್ಟೆ ಹಾಗೂ ಡಿಎಸ್ ಪಿ ನೇತೃತ್ವದಲ್ಲಿ ಕನ್ನಡ ಧ್ವಜಕ್ಕೆ ರಕ್ಷಣೆ ನೀಡಲಾಗಿದ್ದು, ಪೊಲೀಸ್ ಕಮಿಷ್ನರ್ ಕೆ.ತ್ಯಾಗರಾಜನ್ ವೀಕ್ಷಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ