Latest

ಕಾಂಗ್ರೆಸ್ಸಲ್ಲಿದ್ರೆ ED ಕಾಟ… ಬಿಜೆಪಿಗೆ ಬಂದ್ರೆ CD ಕಾಟ…

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಯಾವುದಾದರೊಂದು ಬೆಳವಣಿಗೆ ನಡೆಯಿತೆಂದರೆ ಸೋಷಿಯಲ್ ಮೀಡಿಯಾಗಳು ಫುಲ್ ಆ್ಯಕ್ಟಿವ್ ಆಗುತ್ತವೆ. ಜನರಿಗೆ ಸುದ್ದಿಯ ಜೊತೆಗೆ ಒಂದಿಷ್ಟು ಮನರಂಜನೆಯನ್ನೂ ಕೊಡುತ್ತವೆ.

ಈಗ ರಾಜ್ಯದಲ್ಲಿ ನಡೆಯುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ತರಹೇವಾರು ಮೆಸೇಜ್ ಗಳು ಹರಿದಾಡುತ್ತಿವೆ. ವಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಹರಿದಾಡುವ ವ್ಯಂಗ್ಯ ಜೋಕ್ ಗಳು ಜನರಿಗೆ ಟೈಮ್ ಪಾಸ್ ಮಾಡುತ್ತಿವೆ.

ಸಾಮಾನ್ಯವಾಗಿ ಕೇಂದ್ರದಲ್ಲಿ ಆಡಳಿತ ನಡೆಸುವ ಸಂಸ್ಥೆಗಳು ತನಿಖಾ ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ವಿರೋಧಿಗಳನ್ನು ಹಣಿಯುತ್ತವೆ ಎನ್ನುವ ಮಾತಿದೆ. ಈಗಿನ ಬಿಜೆಪಿ ಸರಕಾರ ಇಡಿ (ಎನ್ಫೋರ್ಸ್ ಮೆಂಟ್ ಡೈರೆಕ್ಟರೇಟ್ -ಜಾರಿ ನಿರ್ದೇಶನಾಲಯ) ಮತ್ತು ಐಟಿ (ಇನ್ ಕಮ್ ಟ್ಯಾಂಕ್ಸ್ – ಆದಾಯ ತೆರಿಗೆ) ಮೂಲಕ ಕಾಂಗ್ರೆಸ್ ಮುಖಂಡರಿಗೆ ಕಾಟ ಕೊಡುತ್ತಿದೆ ಎನ್ನುವ ಆರೋಪ ಕಾಂಗ್ರೆಸ್ ನಾಯಕರಿಂದ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಕಾಟ ತಪ್ಪಿಸಿಕೊಳ್ಳೋಣ ಎಂದು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದರೆ ಏನಾಗಿದೆ ನೋಡಿ ಅವರ ಕತೆ ಎನ್ನುತ್ತಿದೆ ಇಲ್ಲೊಂದು ಮೆಸೇಜ್.

ಇನ್ನೂ ಒಂದಷ್ಟು ಜನ ಕಾಂಗ್ರೆಸ್ಸಿಂದ ಬಿಜೆಪಿಗೆ ಬರ್ಬೇಕು ಅಂತಿದ್ದವರು ಈ CD ಭಯದಿಂದ ಕಾಂಗ್ರೆಸ್ಸಲ್ಲೇ ಉಳಿಯಲು ನಿರ್ಧರಿಸಿದ್ದಾರಂತೆ, ಕಾಂಗ್ರೆಸ್ಸಲ್ಲಿದ್ರೆ ED ಕಾಟ ಅಂತ ಬಿಜೆಪಿಗೆ ಬಂದ್ರೆ CD ಕಾಟ, ಇದೋಂಥರಾ ಅತ್ತ ಧರಿ ಇತ್ತ ಪುಲಿ ಅಂತಾರಲ ಹಾಗಾಯ್ತು…

ಸಿಡಿ ವಿಷಯ 4 ತಿಂಗಳ ಮೊದಲೇ ಗೊತ್ತಾಗಿತ್ತು, ಎಷ್ಟೇ ಖರ್ಚಾದರೂ ಜೈಲಿಗೆ ಹಾಕಿಸದೆ ಬಿಡಲ್ಲ – ರಮೇಶ ಜಾರಕಿಹೊಳಿ

Home add -Advt

 

ರಮೇಶ ಜಾರಕಿಹೊಳಿಗೆ 26 ಗಂಟೆ ಮೊದಲು ಸಿಡಿ ಬಗ್ಗೆ ಹೈಕಮಾಂಡ್ ಹೇಳಿದ್ದೇನು?

Related Articles

Back to top button