Latest

ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ: ಬಿಜೆಪಿ ಶಾಸಕರೊಬ್ಬರು ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾ ವಿಧಾನಸಭೆಯಲ್ಲಿ ನಡೆದಿದೆ.

ರಾಜ್ಯ ಸರ್ಕಾರ ಭತ್ತ ಖರೀದಿಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಶಾಸಕ ಸುಭಾಷ್ ಪಾಣಿಗ್ರಹಿ ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Home add -Advt

ದೇಬ್ ಗಢದಲ್ಲಿ ಸರ್ಕಾರ ಭತ್ತ ಖರೀದಿಸುತ್ತಿರಲಿಲ್ಲ. ಎರಡು ಲಕ್ಷ ಕ್ವಿಂಟಾಲ್ ಗಿಂತಲೂ ಹೆಚ್ಚು ಭತ್ತ ಕೊಳೆಯುತ್ತಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಭತ್ತ ಖರೀದಿಗೆ ಮುಂದಾಗಲಿ ಎಂದು ಶಾಸಕ ಸುಭಾಷ್ ಆಗ್ರಹಿಸಿದ್ದರು.

Related Articles

Back to top button