*ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಮಠಾಧೀಶರು*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಭೇಟಿ ಮಾಡಿ ಅಭಿನಂದಿಸಿದರು.
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿ ವಾಲ್ಮೀಕಿ ಗುರುಪೀಠ, ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಕುಂಚಿಟಿಗ ಮಹಾಸಂಸ್ಥಾನ, ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೋವಿ ಗುರುಪೀಠ, ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ ದೇವಾಂಗ ಗುರುಪೀಠ, ಜಗದ್ಗುರು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕನಕ ಗುರುಪೀಠ, ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಉಪ್ಪಾರ ಗುರುಪೀಠ, ಜಗದ್ಗುರು ಶ್ರೀ ಮಾಚಿದೇವ ಸ್ವಾಮೀಜಿ ಮಡಿವಾಳ ಗುರುಪೀಠ, ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ ಈಡಿಗ ಗುರುಪೀಠ, ಜಗದ್ಗುರು ಶ್ರೀ ಯಾದವಾನಂದ ಸ್ವಾಮೀಜಿ ಯಾದವ ಗುರುಪೀಠ, ಶ್ರೀ ಸಿದ್ದರಾಮಯ್ಯ ಚೈತನ್ಯ ಮಹಾಸ್ವಾಮಿಜಿ ಕುಣಿಗಲ್, ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ ಹಡಪದ ಅಪ್ಪಣ್ಣ ಗುರುಪೀಠ, ಶ್ರೀ ಕುಂಬಾರಗುಂಡಯ್ಯ ಸ್ವಾಮೀಜಿ ಕುಂಬಾರ ಗುರುಪೀಠ ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸನಗೌಡ ಬಾದರ್ಲಿ, ಆರ್ ಆರ್ ನಗರದ ಲಗ್ಗೆರೆ ನಾರಾಯಣಸ್ವಾಮಿ, ಅವರ ಪತ್ನಿ ಇದ್ದರು.




