Latest

ರುಚಿ ಹಾಗು ಪೌಷ್ಟಿಕಾಂಶಯುಕ್ತ ಕಜ್ಜಾಯ

ಝರಿ ಕಡುಬು

ಅಕ್ಕಿ, ಕಬ್ಬಿನ ಹಾಲು ಉಪಯೋಗಿಸಿ ಮಾಡುವ ಈ ಕಜ್ಜಾಯ ತುಂಬಾ ರುಚಿ ಹಾಗು ಪೌಷ್ಟಿಕಾಂಶವನ್ನು ಹೊಂದಿರುತ್ತದೆ.
ಬೇಕಾದ ಸಾಮಗ್ರಿಗಳು:
ಅಕ್ಕಿ  1 ಕಪ್, ಅವಲಕ್ಕಿ ಅರ್ಧ ಕಪ್, ರುಚಿಗೆ ಉಪ್ಪು, ಕಬ್ಬಿನ ಹಾಲು 2 -3 ಕಪ್
ಮಾಡುವ ವಿಧಾನ:
ಅಕ್ಕಿಯನ್ನು    ಒಂದುರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಅಕ್ಕಿಯನ್ನು ಚೆನ್ನಾಗಿ ತೊಳೆದು ಅವಲಕ್ಕಿ ಹಾಕಿ ನುಣ್ಣಗೆ ಕಬ್ಬಿನ ಹಾಲಿನಲ್ಲಿ ರುಬ್ಬಬೇಕು. ರುಚಿಗೆ ಉಪ್ಪು ಸೇರಿಸಬೇಕು. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಿರಬೇಕು. ಸಿಹಿ ಹೆಚ್ಚಿಗೆ ಬೇಕೆನಿಸಿದರೆ ಬೆಲ್ಲ ಸೇರಿಸಬಹುದು. ಹಿಟ್ಟು ರುಬ್ಬಿ  8-10 ತಾಸು ಹಾಗೆ ಇಟ್ಟಿರಬೇಕು . ಹಿಟ್ಟು ಉಬ್ಬಿ ಬಂದು ಕಡಬು ಸ್ಪಂಜಿನ ತರ ಮೃದುವಾಗಿರುತ್ತೆ. ಹಿಟ್ಟನ್ನಾ ಕುಕ್ಕರ್ ಕಂಟೇನರ್ ಅಥವಾ ಪ್ಲೇಟಿನಲ್ಲಿ ಹಾಕಿ ಉಗಿಯಲ್ಲಿ 30 ನಿಮಿಷ ಬೇಯಿಸಬೇಕು. ಮೃದುವಾದ ಕಡುಬು ಸವಿಯಲು ತಯಾರಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button