Kannada NewsKarnataka News

ಅಸಲೀ ಆಟ ಈಗ ಶುರು: ಬೆಳಗಾವಿ ಮೇಲೆ ಎಲ್ಲರ ಕಣ್ಣು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈಗ ಇಡೀ ರಾಜ್ಯದ ಕಣ್ಣು ಬೆಳಗಾವಿ ಮೇಲೆ. ಇದಕ್ಕೆ ಕಾರಣ ಎರಡು.

  1. ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕದ್ದು
  2.  ಬೆಳಗಾವಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದ್ದು

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮಂಗಳವಾರ ವಿಚಿತ್ರ ತಿರುವು ಸಿಕ್ಕಿದೆ. ಬೆಂಗಳೂರು ಕೇಂದ್ರೀಕೃತವಾಗಿದ್ದ ಪ್ರಕರಣ ನಿನ್ನೆ ಏಕಾಏಕಿ ಬೆಳಗಾವಿಯತ್ತ ತಿರುಗಿದೆ. ಯುವತಿಯ ಪಾಲಕರು ಇದ್ದಕ್ಕಿದ್ದಂತೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಮ್ಮ ಮಗಳನ್ನು ಮಾರ್ಚ್ 2ರಂದು ( ಸಿಡಿ ಪ್ರಕರಣ ಹೊರಬಂದ ದಿನ) ಅಪಹರಣ ಮಾಡಲಾಗಿದೆ ಎಂದು ದೂರಿದ್ದಾರೆ.

ಇದು ಇಡೀ ಪ್ರಕರಣ ಹೊಸ ದಿಕ್ಕಿನತ್ತ ಸಾಗಲು ಕಾರಣವಾಗಿದೆ. ಈ ದೂರಿನಿಂದಾಗಿ ರಮೇಶ ಜಾರಕಿಹೊಳಿಗೆ ಹಿನ್ನಡೆಯಾಗುತ್ತದೆಯೋ ಅಥವಾ ಅವರ ವಿರೋಧಿಗಳಿಗೆ ಹಿನ್ನಡೆಯಾಗುತ್ತದೆಯೋ ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.

ಇದೇ ವೇಳೆ ರಮೇಶ ಜಾರಕಿಹೊಳಿ ವಿರುದ್ಧ ಕನ್ನಡ ಸಂಘಟನೆಯೊಂದು ಬೆಳಗಾವಿಯಲ್ಲಿ ದೂರು ದಾಖಲಿಸಿದೆ. ಒಟ್ಟಾರೆ ಇಡೀ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆಯುತ್ತಿದೆ. ಹಾಗಾಗಿ ಬೆಳಗಾವಿಯತ್ತ ಎಲ್ಲರ ಕಣ್ಣು ನೆಟ್ಟಿದೆ.

ಲೋಕಸಭಾ ಚುನಾವಣೆ

ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದ ಏಕೈಕ ಲೋಕಸಭಾ ಉಪಚುನಾವಣೆ ಇದಾಗಿರುವುದರಿಂದ ಸಹಜವಾಗಿಯೇ ಇಡೀ ರಾಜ್ಯದ ಕಣ್ಣು ಕ್ಷೇತ್ರದ ಮೇಲೆ ನೆಟ್ಟಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ. ಇದೇ 23ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬಿಜೆಪಿಯಲ್ಲಿ 30ಕ್ಕೂ ಹೆಚ್ಚು, ಕಾಂಗ್ರೆಸ್ ನಲ್ಲಿ 3 -4 ಜನ ಆಕಾಂಕ್ಷಿಗಳಿದ್ದಾರೆ. ಎರಡೂ ಪಕ್ಷಗಳ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.

ಒಟ್ಟಾರೆ ಬೆಳಗಾವಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಎಲ್ಲರ ದೃಷ್ಟಿ ಬೆಳಗಾವಿಯತ್ತ ನೆಟ್ಟಿದೆ.

ಬೆಳಗಾವಿ ಲೋಕಸಭೆ ಸೇರಿ ಉಪಚುನಾವಣೆ ದಿನಾಂಕ ಪ್ರಕಟ

ತಕ್ಷಣದಿಂದ ಚುನಾವಣೆ ನೀತಿ ಸಂಹಿತೆ ಜಾರಿ: ಮಾ.23ರಿಂದ ನಾಮಪತ್ರ ಸಲ್ಲಿಕೆ

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್ : ಬೆಳಗಾವಿಯಲ್ಲಿ ಯುವತಿಯ ತಂದೆ ಕಿಡ್ನ್ಯಾಪ್ ದೂರು

ರಮೇಶ್ ಜಾರಕಿಹೊಳಿಯಿಂದ 5 ಕೋಟಿ ರೂ. ಸುಲಿಗೆ ಮಾಡಿತ್ತಾ ಸಿಡಿ ಗ್ಯಾಂಗ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button