Kannada NewsLatest

ಕೊರೋನಾ ಆತಂಕದ ಮಧ್ಯೆ ಭಂಡಾರ ಜಾತ್ರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಅಟ್ಟಹಾಸದ ನಡುವೆಯೇ  ಅದ್ದೂರಿ ಜಾತ್ರಾ ಮಹೋತ್ಸವವೊಂದು ನಡೆದಿದ್ದು, ಭಂಡಾರ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ನಡೆಯುವ ಭಂಡಾರ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಜಾತ್ರೆಯಲ್ಲಿ ನೆರೆದಿದ್ದರು. ಈ ಜಾತ್ರೆಯ ವಿಶೇಷವೆಂದರೆ ದೇವರ ಪಲ್ಲಕ್ಕಿ ಉತ್ಸವದ ವೇಳೆ ಭಂಡಾರದೋಕುಳಿ ನಡೆಸಲಾಗುತ್ತದೆ. ನೆರೆದ ಭಕ್ತರು ಭಂಡಾರವನ್ನು ಪಲ್ಲಕ್ಕಿಯ ಮೇಲೆ ಎರಚಿ ಭಕ್ತಿ ಮೆರೆಯುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಸಾಗರೋಪಾದಿಯಲ್ಲಿ ಜನ ಭಾಗವಹಿಸಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಜಾತ್ರೆಯಲ್ಲಿ ಸುಮಾರು ಒಂದುವರೆ ಟನ್ ನಷ್ಟು ಭಂಡಾರವನ್ನು ಪಲ್ಲಕ್ಕಿ ಮೇಲೆ ಎರಚಲಾಗಿದ್ದು, ಇಡೀ ಜಾತ್ರಾ ಸ್ಥಳದಲ್ಲಿ ಎಲ್ಲಿ ನೋಡಿದರಲ್ಲಿ ಭಂಡಾರವೇ ಕಾಣಿಸುವಂತಿತ್ತು. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಭಂಡಾರದೋಕುಳಿ, ಡೊಳ್ಳು ಕುಣಿತ ವಿಶೇಷ. ಕೊರೊನಾ ಹಿನ್ನೆಲೆಯಲ್ಲಿ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿದ್ದರೂ ಕೂಡ ಇಲ್ಲಿನ   ಜಾತ್ರಾ ಮಹೋತ್ಸವ ಆಚರಿಸಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button