Latest

ವಿಧಾನಸಭೆ ಅಧಿವೇಶನ ಹಠಾತ್ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿಕೆ ಹಿನ್ನೆಲೆಯಲ್ಲಿ ತೀವ್ರ ಗದ್ದಲ, ಗಲಾಟೆ ಮುಂದುವರಿದಿದ್ದರಿಂದ ವಿಧಾನ ಮಂಡಳದ ಅಧಿವೇಶನವನ್ನು ಹಠಾತ್ ಆಗಿ ಅನಿರ್ಧಿಷ್ಟಾವದಿಗೆ ಮುಂದೂಡಲಾಗಿದೆ.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿವೇಶನವನ್ನು ಮುಂದೂಡಿದ್ದಾರೆ. ಕಳೆದ 3 ದಿನದಿಂದ ರಮೇಶ ಜಾರಕಿಹೊಳಿ ಸಿಡಿ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು, 6 ಸಚಿವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ ಸುಗಮ ಕಲಾಪ ನಡೆದಿರಲಿಲ್ಲ.

ಇಂದು ಸಚಿವ ಸುಧಾಕರ ಏಕ ಪತ್ನಿ ವ್ರತ ಕುರಿತು ಎಲ್ಲ 224 ಶಾಸಕರ ತನಿಖೆ ನಡೆಯಲಿ ಎಂದಿದ್ದು ಮತ್ತಷ್ಟ ಪ್ರತಿಭಟನೆ ಕಾರಣವಾಗಿತ್ತು. ಹಲವಾರು ಬಾರಿ ಮನವಿ ಮಾಡಿದರೂ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಸಭಾಧ್ಯಕ್ಷರು ಅಧಿವೇಶನವನ್ನು ಹಠಾತ್ ಮುಂದೂಡಿದರು.

ಈ ಮೊದಲಿನ ನಿರ್ಣಯದಂತೆ ಅಧಿವೇಶನ  ಮಾ.30ರ ವರೆಗೆ ನಡೆಯಬೇಕಿತ್ತು.

Home add -Advt

ಒಂದೇ ಹೆಂಡ್ತಿ ಚಾಲೇಂಜ್ ; ಶಾಸಕರ ಸಹಿ ಸಂಗ್ರಹಕ್ಕೆ ಮುಂದಾದ ಕಾಂಗ್ರೆಸ್

224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್

 

ಬೆಂಕಿ ಹೊತ್ತಿಸಿದ ಸುಧಾಕರ್ ಏಕಪತ್ನಿ ವ್ರತ ಹೇಳಿಕೆ

Related Articles

Back to top button