Latest

ಸಚಿವ ಸುಧಾಕರ್ ಹೇಳಿಕೆಯನ್ನು ಪ್ರಧಾನಿ ಮೋದಿ, ಅಮಿತ್ ಶಾಗೆ ಕಳುಹಿಸುತ್ತೇವೆ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆ ವಿರುದ್ಧ ಕಿಡಿಕಾರಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸುಧಾರ್ ಆರೋಗ್ಯ ಮಂತ್ರಿಯಲ್ಲ, ಅನಾರೋಗ್ಯ ಮಂತ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ, ಪೂರ್ಣಿಮಾ ಶ್ರೀನಿವಾಸ್ ಅಷ್ಟೇ ಏಕೆ ಸಚರಾದ ಶಶಿಕಲಾ ಜೊಲ್ಲೆಯವರೂ ಇದ್ದಾರೆ ಅವರೆಲ್ಲರಿಗೂ ಕೂಡ ತಮ್ಮ ಹೇಳಿಕೆಯಿಂದ ಅವಮಾನ ಮಾಡಿದ್ದಾರೆ. ಬಾಯಿ ತೆಗೆದರೆ ರಾಮನ ಪಕ್ಷದವರು ಎನ್ನುತ್ತಾರೆ ಆದರೆ ಅವರ ಬಾಯಲ್ಲಿ ಇಂತಹ ಮಾತುಗಳು ಬರುತ್ತಿವೆ ಎಂದು ಗುಡುಗಿದರು.

ಸುಧಾಕರ್ ಹೇಳಿಕೆ ಬಗ್ಗೆ ನಾವು ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಇ-ಮೇಲ್ ಮಾಡುತ್ತೇವೆ. ಎಲ್ಲರನ್ನೂ ಸಂಶಯ ದೃಷ್ಠಿಯಿಂದ ನೋಡುವಂತೆ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರ ಬಗ್ಗೆಯೂ ಸಂಶಯದಿಂದ ನೋಡುವಂತೆ ಮಾಡಿದ್ದಾರೆ. ಇದು ನಮೆಗೆಲ್ಲ ಮಾಡಿದ ಅಪಮಾನವಾಗಿದೆ. ರಾಜಕಾರಣಕ್ಕೆ ಮಹಿಳೆಯರು ಬರುವುದೇ ವಿರಳ. ಹೀಗಿರುವಾಗ ಬಂದವರನ್ನು ಸಂಶಯದಿಂದ ನೋಡುವಂತೆ ಮಾಡಿದ್ದಾರೆ. ಸುಧಾಕರ್ ಹಿಂದೂ ರಾಷ್ಟ್ರ, ಸಂಸ್ಕೃತಿಗೆ ಅವಮಾನಮಾಡಿದ್ದಾರೆ. ಸುಧಾಕರ್ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ಗೊತ್ತಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button