ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಕೆ ಎಲ್ ಇ ಇಂಜೀನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ ೧೯ ಪ್ರಾಜೆಕ್ಟಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಆಯ್ ಆಯ್ ಎಸ್ ಸಿ ಕ್ಯಾಂಪಸ್, ಬೆಂಗಳೂರು ಪ್ರಾಯೋಜಕತ್ವಕ್ಕೆ ಆಯ್ಕೆಯಾಗಿವೆ.
ಬೆಳಗಾವಿ ವಿಭಾಗದಲ್ಲಿಯೇ ಅತೀ ಹೆಚ್ಚಿನ ಪ್ರಾಜೆಕ್ಟಗಳು ಕಾಲೇಜಿನಿಂದ ಆಯ್ಕೆಯಾಗಿವೆ ಎಂದು ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ತಿಳಿಸಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ೮ ಪ್ರಾಜೆಕ್ಟ, ಇಲೇಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ೬ ಪ್ರಾಜೆಕ್ಟ, ಕಂಪ್ಯೂಟರ ಸಾಯನ್ಸ ವಿಭಾಗದ ೦೩ ಪ್ರಾಜೆಕ್ಟ ಹಾಗೂ ಸಿವಿಲ್ ವಿಭಾಗದ ೦೨ ಪ್ರಾಜೆಕ್ಟಗಳು ಆಯ್ಕೆಯಾಗಿವೆ. ಈ ಪ್ರಾಜೆಕ್ಟಗಳಿಗೆ ಒಟ್ಟು ಒಂದು ಲಕ್ಷ ಆರು ಸಾವಿರ ರೂಪಾಯಿ ಪ್ರಾಯೋಜಕತ್ವ ಹಣ ನೀಡಲಿದ್ದಾರೆ. ಈ ಪ್ರಾಜೆಕ್ಟಗಳ ಮೌಲ್ಯಮಾಪನವನ್ನು ಮುಂಬರುವ ಮೇ -ಜೂನ್ ನಲ್ಲಿ ಆನಲೈನ್ ಮೂಲಕ ಕೈಗೊಳ್ಳಲಿದ್ದಾರೆ.
ಪ್ರಾಧ್ಯಾಪಕರಾದ ಡಾ. ಮಹಾಂತಯ್ಯ ಮಠಪತಿ, ಕುಮಾರ ಚೌಗಲಾ, ರಾಜೇಂದ್ರ ಕೆರುಮಾಳಿ, ವಿರಣ್ಣಾ ಮೋದಿ, ಸಂಗಮೇಶ ಬಂಡಿ, ಪ್ರಸಾದ ರಾಯನ್ನವರ, ಮಹೇಶ ಲಟ್ಟೆ, ರಾಜು ಹೆಬ್ಬಾಳೆ, ದರ್ಶನ ಬಿಳ್ಳೂರ, ಬಸವರಾಜ ಚೌಕಿಮಠ, ಮನೋಜ ನಾಂದಣಿ, ಜ್ಯೋತಿ ಸಿ. ಕೆ., ಚೇತನ ಬುಲ್ಲಾ, ಬಸವರಾಜ ಹುಂಶ್ಯಾಳ, ಬಾಹುಬಲಿ ಅಕೀವಾಟೆ, ಡಾ. ಅಮರ ಚೌಗುಲೆ, ಸವೀತಾ ಮಾಳಿ ಮಾರ್ಗದರ್ಶನ ನೀಡಿದ್ದರು.
ವಿಭಾಗ ಮುಖ್ಯಸ್ಥರಾದ ಸತೀಶ ಭೋಜನ್ನವರ, ಪ್ರದೀಪ ಹೊದ್ಲೂರ ಉಪಸ್ಥಿತರಿದ್ದರು. ಕಾಲೇಜಿನ ತಾಂತ್ರಿಕ ಸಂಯೋಜಕರಾಗಿ ಅಭಿನಂದನ ಕಬ್ಬೂರ ಕಾರ್ಯನಿರ್ವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ