Latest

ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದ ತಡೆಗೋಡೆ

ಪ್ರಗತಿವಾಹಿನಿ ಸುದ್ದಿ; ಅಥಣಿ: ಅಥಣಿ ಪಟ್ಟಣದ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಕರೆಯ ಸುತ್ತ ನಿರ್ಮಿಸುತ್ತಿದ್ದ ತಡೆಗೊಡೆ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಕುಸಿದು ಬಿದ್ದಿದೆ.

ಅಥಣಿ ಪಟ್ಟಣದ ಕೆರೆ ಸುತ್ತ ನಿರ್ಮಿಸುತ್ತಿದ್ದ ತಡೆಗೋಡೆ ನಿರ್ಮಾಣ ಹಂತದಲ್ಲೇ ಕುಸಿದಿದ್ದು, ತಡೆಗೋಡೆ ಪಕ್ಕದಲ್ಲಿ ನಿಲಿಸಿದ್ದ ಟಿಪ್ಪರ್ ಸಮೇತವಾಗಿ ಕರೆಗೆ ಉರುಳಿರುವ ಘಟನೆ ನಡೆದಿದೆ.
‌‌
ಈ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಹಾಗೂ ಅಭಿಯಂತರರನ್ನು ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಒಬ್ಬರು ಮೊಬೈಲ್ ಸ್ವಿಚ್ಡ ಆಫ್ ಮಾಡಿದ್ದರೆ ಮತ್ತೊಬ್ಬರು ಮೊಬೈಲ್ ರೀಸಿವ್ ಮಾಡುತ್ತಿಲ್ಲ. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಈ ತಡೆಗೊಡೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಮತ್ತು ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿ, ಅಭಿಯಂತರರ ಮೇಲೆ ಕ್ರಮ ಜರುಗಿಸಬೇಕು‌ ಮತ್ತು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು‌ ಕೆರೆ ಅಭಿವೃದ್ಧಿ ಹೋರಾಟ ಸಮಿತಿ‌ಯ ಪ್ರಶಾಂತ ತೊಡಕರ ಆಗ್ರಹಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button