Kannada NewsKarnataka NewsLatest

​ ಸತೀಶ್ ಜಾರಕಿಹೊಳಿ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವಿಶ್ರಾಂತ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ.
ಸಮಾಜದ ಎಲ್ಲ ವರ್ಗಗಳನ್ನು, ಕ್ಷೇತ್ರದ ಎಲ್ಲ ಭಾಗಗಳನ್ನು ತಲುಪುವುದಕ್ಕಾಗಿ ತಮ್ಮದೇ ಕಾರ್ಯಯೋಜನೆ ಹಾಕಿಕೊಂಡು ಪ್ರಚಾರದಲ್ಲಿ ತೊಡಗಿರುವ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂತಿ ಬಸ್ತವಾಡ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಜನ ಪ್ರತಿನಿಧಿಗಳ, ಕಾರ್ಯಕರ್ತರುಗಳ ಹಾಗೂ ಸಾರ್ವಜನಿಕರ ​ಸಭೆ ನಡೆಸಿದ ಹೆಬ್ಬಾಳಕರ್, ಸತೀ​ಶ್ ಜಾರಕಿಹೊಳಿ ಅವರನ್ನು​ ಲಕ್ಷಾಂತರ ಮತಗಳಿಂದ ಗೆಲ್ಲಿಸಿ ತರಬೇಕೆಂದು ವಿನಂತಿಸಿದ​ರು.​
ಸತೀ​ಶ್ ಜಾರಕಿಹೊಳಿ ಅವರು​ ದೂ​​ರದೃಷ್ಟಿಯ ನಾಯಕರಾಗಿದ್ದು, ಅವರ ಆಚಾರ, ವಿಚಾರಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಭಾವವನ್ನು ಬೀರಿವೆ​.​ ಈ ಪ್ರಭಾವಗಳು ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗಬಾರದು, ಸತೀಶಣ್ಣ​ನ​ವರ ವರ್ಚಸ್ಸ​ನ್ನು​ ಹಳ್ಳಿಯಿಂದ ದಿಲ್ಲಿಯವರೆಗೆ ಪರಿಚಯಿಸಬೇಕಾಗಿದೆ, ಇದ​ಕ್ಕೋಸ್ಕರ ​ಎಲ್ಲರೂ ಒಗ್ಗಟ್ಟಿ​ನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
 
ಸತೀಶಣ್ಣ​ನ​ವರ ನಾಯಕತ್ವ, ನಿಸ್ವಾರ್ಥ ಸೇವೆ, ಸಮಾಜಮುಖಿ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶ​ಕ. ಅವರೊಬ್ಬ ಶಾಂತಿ, ಸಂಯಮ ಹಾಗೂ ಶಿಸ್ತಿನ ಸಿಪಾಯಿ​.​ ಯಾವಾಗಲೂ ಸಮಾ​​ಜದ ಬೆಳವಣಿಗೆಗಾಗಿ ಹಂಬಲಿಸುವ ಶ್ರಮಜೀವಿ​.​ ಇಂತಹ ಶ್ರಮಜೀವಿಯನ್ನು ​ಬೆಂಬಲಿಸಿ ಲೋಕಸಭೆಗೆ ಆರಿಸಿ ಕಳಿಸೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
​ ಈ ಸಂದರ್ಭದಲ್ಲಿ ನಾವಗೆ ಗ್ರಾಮದ ಬಿಜೆಪಿಯ ಮುಖಂಡರಾದ ಕಲ್ಲಪ್ಪ ಜಿಗರೆ ನೇತೃತ್ವದಲ್ಲಿ ಮೂವತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದರು.
ಲೋಕಸಭಾ ಉಪ ಚುನಾವಣೆಯ ಪ್ರಕ್ರಿಯೆ​ ಆರಂಭವಾದ ನಂತರ ಅನೇಕರ ಬಿಜೆಪಿಯನ್ನು‌ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಸೇರ್ಪಡೆಯಾಗಿ​ದ್ದಾರೆ.
​ ನರೇಗಾ ಕಾ​ರ್ಮಿಕರ ಬೆಂಬಲ 
ನರೇಗಾ ಯೋಜನೆಯಡಿ ಕೆಲಸ ಮಾಡುವ ನೂರಕ್ಕೂ ಹೆ​ಚ್ಚು ಕಾರ್ಮಿಕರ ಬಂಧುಗಳ ಸಭೆಯನ್ನು ಆಯೋಜಿಸಿ​ದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​, ​ ಸತೀ​ಶ್​ ಜಾರಕಿಹೊಳಿಯವರನ್ನು ಬೆಂಬಲಿಸುವ ಮೂಲಕ ಲೋಕಸಭೆಗೆ ಆಯ್ಕೆ ಮಾಡೋಣವೆಂದು ಮನವಿ​ ಮಾಡಿದರು.
ಅವರನ್ನು ಪ್ರಚಂಡ ಬಹುಮತಗಳಿಂದ ಆರಿಸಿ ತಂದು ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕೆಲಸಗಳಿಗೆ ಕಾರಣರಾಗೋಣ​. 
ಸತೀಶಣ್ಣ​ ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಅನೇಕ ಜನಪರ, ಸಾಮಾಜಿಕ, ಹಾಗೂ ಇನ್ನಿತರ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳವ ಮುಖೇನ ಜನ ಮನ್ನಣೆ ಗಳಿಸಿ, ಸಾವಿರಾರು ಕಾರ್ಯಕರ್ತರನ್ನು ಹುಟ್ಟು ಹಾಕುವುದರೊಂದಿಗೆ ಪಕ್ಷವನ್ನು ಬಲಪಡಿಸಿದ್ದಾರೆ​ ಎಂದು ಹೆಬ್ಬಾಳಕರ್ ಹೇಳಿದರು.
ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button