Latest

ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ

ಪ್ರಗತಿವಾಹಿನಿ ಸುದ್ದಿ; ಬೀದರ್: ಬಸವಕಲ್ಯಾಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮನವೊಲಿಕೆ ಮಾಡುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ನಾಯಕರು ಪದೇ ಪದೇ ಒತ್ತಡ ಹೇರುತ್ತಿರುವುದಕ್ಕೆ ಬೇಸತ್ತ ಖೂಬಾ, ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ ಎಂದು ಮನೆ ಮುಂದೆ ಬೋರ್ಡ್ ಹಾಕಿದ್ದಾರೆ.

ಬಸವಕಲ್ಯಾಣದಿಂದ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಖೂಬಾ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯುವಂತೆ ಮಲ್ಲಿಕಾರ್ಜುನ ಖೂಬಾ ಮೇಲೆ ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ. ಮಾತ್ರವಲ್ಲ ಮನೆಗೆ ಭೇಟಿ ನೀಡಿ ಮನವೊಲಿಸುವ ಯತ್ನ ನಡೆಸಿದ್ದಾರೆ. ಇದರಿಂದ ಬೇಸರಗೊಂಡ ಖೂಬಾ ಮನೆ ಮುಂದೆ ಬಿಜೆಪಿ ವರಿಷ್ಠರಿಗೆ ಪ್ರವೇಶವಿಲ್ಲ. ನಿಮಗೆ ಭೇಟಿಯಾಗುವ ಅಗತ್ಯವಿದ್ದರೆ ಕಲಬುರ್ಗಿಗೆ ಹೋಗಿ ಅಭ್ಯರ್ಥಿಯನ್ನು ಭೇಟಿಯಾಗಿ. ನಮ್ಮನ್ನು ಭೇಟಿಯಾಗುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.

Home add -Advt

ಬಿಜೆಪಿ ಶರಣು ಸಲಗರ್ ಅವರಿಗೆ ಟಿಕೆಟ್ ನೀಡಿದ್ದು, ಇದರಿಂದ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿ ಡಿ.ಕೆ.ಶಿವಕುಮಾರ್ ಹೆಸರು

Related Articles

Back to top button