CrimeKarnataka NewsLatest
*BREAKING: ಮಹಿಳೆಯೊಂದಿಗೆ ರ್ಯಾಪಿಡೋ ಚಾಲಕನ ಅಸಭ್ಯ ವರ್ತನೆ: ಮನೆ ಗೇಟ್ ಗೆ ಮೂತ್ರ ವಿಸರ್ಜಿಸಿ ವಿಕೃತಿ*

ಪ್ರಗತಿವಾಹಿನಿ ಸುದ್ದಿ: ರ್ಯಾಪಿಡೋ ಬೈಕ್ ಚಾಲಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಯ ಮನೆಯ ಗೇಟ್ ಗೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ರ್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ಬಂದ ಮಹಿಳೆಗೆ ಬೈಕ್ ಚಾಲಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಆಕೆಯ ಮನೆಯ ಗೇಟ್ ಗೆ ಮೂತ್ರ ವಿಸರ್ಜನೆ ಮಾಡಿ ಬಾಟಲ್ ನಲ್ಲಿದ್ದ ಗಲೀಜು ನೀರನ್ನು ಗೇಟ್ ಗೆ ಎರಚಿದ್ದಾನೆ.
ಅಷ್ಟೇ ಅಲ್ಲ ಅಲ್ಲಿಂದ ತೆರಳಿದ ಕೆಲ ಸಮಯದಲ್ಲೇ ಮಹಿಳೆಗೆ ಆಡಿಯೋ ನೋಟ್ ಕಳುಹಿಸಿದ್ದಾನೆ. ಅದರಲ್ಲಿ ತಾನು ಗೇಟ್ ಗೆ ಬಾಟಲಿಯಿಂದ ಎರಚಿದ್ದು ನೀರಲ್ಲ ಅದು ಮೂತ್ರ ಎಂದು ಆಡಿಯೋ ಕಳುಹಿಸಿದ್ದಾನೆ.
ಮಹಿಳೆ ಸಿಸಿಟಿವಿ ದೃಶ್ಯ ಹಾಗೂ ತನಗೆ ಕಳುಹಿಸಿದ ಆಡಿಯೋ ನೋಟ್ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




