Kannada NewsLatestNational

*ಮ್ಯಾಗಿ ನೂಡಲ್ಸ್ ನಲ್ಲಿ ಹುಳಗಳು ಪತ್ತೆ: ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಮ್ಯಾಗಿ ನೂಡಲ್ಸ್ ಪ್ಯಾಅಕೇಟ್ ನಲ್ಲಿ ಹುಳಗಳು ಪತ್ತೆಯಾಗಿವೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಹಾರಾಷ್ಟ್ರದ ಕಲ್ಯಾಣ್ ನಗರದ ಮಹಿಳೆಯೊಬ್ಬರು ಮ್ಯಾಗಿ ನೂಡಲ್ಸ್ ಪ್ಯಾಕೇಟ್ ನಲ್ಲಿ ಹುಳಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದು, ಈ ಕುರಿತು ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಒಂದು ವೇಳೆ ನಾವು ಇದನ್ನು ಸೇವಿಸಿದ್ದರೆ ನಮಗೆ ಏನಾಗಬಹುದು? ಎಂಬುದನ್ನು ನೀವೇ ಯೋಚಿಸಿ ಎಂದು ಮಹಿಳೆ ಕಿಡಿಕಾರಿದ್ದಾರೆ. ಈ ವಿಡಿಯೋವನ್ನು ಹಲವರು ಮಹಾರಾಷ್ಟ್ರ ಎಫ್ ಡಿಎ ಮುಖ್ಯಸ್ಥ ತುಕಾರಾಮ್ ಮುಂಡೆ ಅವರಿಗೆ ಟ್ಯಾಗ್ ಮಾಡಿ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button