ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೆಲಸ ಖಾಯಂಗೊಳಿಸುವುದಾಗಿ ಹೇಳಿ ಮಹಿಳೆಯಿಂದ ಬೆತ್ತಲೆ ವಿಡಿಯೋ ಪಡೆದ ವಿಶ್ವವಿದ್ಯಾಲಯದ ಲೈಬ್ರರಿಯನ್ ಅದನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಹರಿಬಿಟ್ಟ ಘಟನೆ ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಬೆಳಕಿಗೆ ಬಂದಿದೆ.
ಕಲಬುರ್ಗಿ ವಿಶ್ವವಿದ್ಯಾಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ, ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೆಲಸ ಖಾಯಂ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಆಕೆಯ ಬೆತ್ತಲೆ ವಿಡಿಯೋ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಕೆಲಸ ಖಾಯಂ ಆಗುತ್ತೆ ಎಂದು ನಂಬಿದ ಮಹಿಳೆ ಆತ ಹೇಳಿದಂತೆ ತನ್ನ ಬೆತ್ತಲೆ ವಿಡಿಯೋಗಳನ್ನು ಕಳುಹಿಸಿದ್ದಳಂತೆ. ಮಹಿಳೆಯಿಂದ ವಿಡಿಯೋ ಪಡೆದ ಶರಣಪ್ಪ ಆ ವಿಡಿಯೋಗಳನ್ನು ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದಾನೆ.
ಗಂಥಾಲಯದ ಅಧಿಕ್ಷಕನಿಂದ ವಂಚನೆಗೊಳಗಾದ ಮಹಿಳೆ ಇದೀಗ ವಿವಿ ಠಾಣೆ ಮೆಟ್ಟಿಲೇರಿದ್ದಾಳೆ ವಿವಿ ಲೈಬ್ರರಿಯನ್ ಶರಣಪ್ಪ ವಿರುದ್ಧ ಸೆಕ್ಷನ್ 292, 407, 420, 354a ಅಡಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ