Latest

ಲೋಕಸಭಾ ಚುನಾವಣೆ ದಿನಾಂಕ ಇಂದೇ ಪ್ರಕಟ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಲೋಕಸಭಾ ಚುನಾವಣೆಗೆ ದಿನಾಂಕವನ್ನು ಚುನಾವಣೆ ಆಯೋಗ ಇಂದೇ ಪ್ರಕಟಿಸುವ ಸಾಧ್ಯತೆ ಇದೆ. 

ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಯ ದಿನಾಂಕವನ್ನು ಘೋಷಿಸಬಹುದು ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಚುನಾವಣೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರ ಆರಂಭವಾಗಿ 5-6 ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ. ಇಂದು ಚುನಾವಣೆ ದಿನಾಂಕ ಘೋಷಣೆಯಾದರೆ ನೀತಿ ಸಂಹಿತೆಯೂ ಇಂದಿನಿಂದಲೇ ಜಾರಿಗೊಳ್ಳಲಿದೆ. 

ಚುನಾವಣೆ ಪ್ರಕ್ರಿಯೆಗಳು ಜೂನ್ 3ರೊಳಗೆ ಮುಕ್ತಾಯವಾಗಬೇಕಿದ್ದು, ಆ ಹೊತ್ತಿಗೆ ರಾಷ್ಟ್ರದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬರಲಿದೆ. 

ಚುನಾವಣೆ ದಿನಾಂಕ ಘೋಷಣೆ ವಿಳಂಬ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಕ್ಷೇಪ ವ್ಯಾಕ್ತಪಡಿಸಿದ್ದವು. ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಮತ್ತು ಯೋಜನೆಗಳ ಘೋಷಣೆ ಮುಕ್ತಾಯವಾಗುವುದಕ್ಕೆ ಕಾಯುತ್ತಿದ್ದೀರಾ ಎಂದೂ ಚುನಾವಣೆ ಆಯೋಗವನ್ನು ಕಾಂಗ್ರೆಸ್ ಪ್ರಶ್ನಿಸಿತ್ತು.

ಇಂದು ಸಂಜೆ ಪ್ರಕಟವಾಗದಿದ್ದರೆ ಗರಿಷ್ಠವೆಂದರೂ ಸೋಮವಾರದೊಳಗೆ ಚುನಾವಣೆ ದಿನಂಕ ಪ್ರಕಟವಾಗಲಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ, ಇತರ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button