ಅವಲಕ್ಕಿ ಹೋಳಿಗೆ
ಹಬ್ಬದ ಊಟದಲ್ಲಿ ಹೋಳಿಗೆ ಇದ್ದರೆ ಊಟಕ್ಕೆ ಮೆರಗೆ ಬೇರೆ.
ಯುಗಾದಿಗೆ ಹೊಸಬಗೆಯ ಹೋಳಿಗೆ ತುಂಬಾ ಸುಲಭವಾಗಿ ಮಾಡಬಹುದು.
ಬೇಕಾದ ಸಾಮಗ್ರಿಗಳು:
ಅವಲಕ್ಕಿ 4 ಕಪ್, ಬೆಲ್ಲ 1ಕಪ್, ಏಲಕ್ಕಿಪುಡಿ ಚಿಟಕಿ, ಅರಿಶಿಣ ಪುಡಿ ಅರ್ಧ ಚಮಚ, ಗೋಧಿಹಿಟ್ಟು 2ಕಪ್ ,ಹಸಿಕೊಬ್ಬರಿ ತುರಿ ಅರ್ಧ ಕಪ್, ಚಿಟಕಿ ಉಪ್ಪು, ಎಣ್ಣೆ ಅರ್ಧ ಕಪ್
ಮಾಡುವ ವಿಧಾನ:
ಹೂರಣ :
ಅವಲಕ್ಕಿ ಯನ್ನು ತೊಳೆದಿಡಬೇಕು.(ದಪ್ಪ ಅವಲಕ್ಕಿ ಆದರೆ ನೆನೆಸಿಟ್ಟು ಮೃದುವಾದಮೆಲೆ ನೀರನ್ನು ತೆಗೆಯಬೇಕು.) ಬೆಲ್ಲ ಮತ್ತು ಕೊಬ್ಬರಿತುರಿ ಸೇರಿಸಿ ರುಬ್ಬಬೇಕು. ರುಬ್ಬಿದ ಹಿಟ್ಟಿಗೆ ಏಲಕ್ಕಿಪುಡಿ ಸೇರಿಸಿ ಕಾಯಿಸಬೇಕು. ಇದನ್ನಾ ಉಂಡೆಗಳನ್ನಾಗಿ ಮಾಡಿ ಇಟ್ಟಿರಬೇಕು.
ಕಣಕ:
ಗೋಧಿಹಿಟ್ಟಿಗೆ ಅರಿಶಿಣ ಪುಡಿ ಉಪ್ಪು ಸೇರಿಸಿ ಚಪಾತಿಹಿಟ್ಟಿನ ಹದಕ್ಕೆ ಕಲಸಿಡಬೇಕು.ಅರ್ಧ ಗಂಟೆ ಆದನಂತರ ಎಣ್ಣೆ ಹಾಕಿ ನಾದಬೇಕು.ಕಣಕದ ಹಿಟ್ಟು ಕಲಸಿಟ್ಟು ಎರಡು ಗಂಟೆ ಬಿಟ್ಟು ಮಾಡಿದರೆ ಹೋಳಿಗೆ ಚನ್ನಾಗಿ ಆಗುತ್ತದೆ.
ಮೊದಲು ಮಾಡಿಟ್ಟ ಹೂರಣದ ಉಂಡೆಗಳನ್ನು ಕಣಕದಲ್ಲಿ ತುಂಬಿ ಹೋಳಿಗೆ ಪೇಪರ್ ಅಥವಾ ಬಾಳೆಯ ಎಲೆಯಲ್ಲಿ ಲಟ್ಟಿಸಬೇಕು. ಸಣ್ಣ ಉರಿಯಲ್ಲಿ ಬೇಯಿಸಬೇಕು. ಮೃದುವಾಗಿ ಹೋಳಿಗೆ ಸವಿಯಲು ತಯಾರಾಗಿದೆ.ಇದನ್ನು 4-5ದಿನ ಇಟ್ಟು ತಿನ್ನಬಹುದು.
– ಸಹನಾ ಭಟ್
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ