Latest

ಉದ್ದವ್ ಠಾಕ್ರೆ ಎದುರಿಗಿರುವ ಸವಾಲುಗಳು ಏನೆಂದರೆ…..

ಶಾಮ ಹಂದೆ; ಮುಂಬೈ: ಪ್ರಸ್ತುತ ಮಹಾರಾಷ್ಟ್ರದಲ್ಲಿ ಕರೋನಾ ಬಿಕ್ಕಟ್ಟು, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ, ಮತ್ತು ಸಾವುಗಳಿಂದಾಗಿ ಭಯದ ವಾತಾವರಣ ಪಸರಿಸಿದೆ. ಸಿಬಿಐ ಮತ್ತು ಎನ್‌ಐಎ ತನಿಖೆ ನಿಮಿತ್ತ ಮಹಾರಾಷ್ಟ್ರದಲ್ಲಿ ಏನು ನಡೆಯುತ್ತಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಜನಪ್ರಿಯತೆಗಾಗಿ ಇಂತಹ ಅರ್ಜಿಗಳನ್ನು ಸಲ್ಲಿಸಲ್ಲಾಗುತ್ತದೆ ಎಂದು ಮೊದಲು ಹೈಕೋರ್ಟ್ ಹೇಳಿತ್ತು. ಮತ್ತು ಅದೇ ಅರ್ಜಿಗೆ ಎಂಟು ದಿನಗಳ ನಂತರ ಸಿಬಿಐ ತನಿಖೆಗೆ ಆದೇಶಿಸಿತು.

ಪರಮವೀರ್ ಚಕ್ರ ಸಿಕ್ಕಿದ ಹಾಗೇ! ಶಿವಸೇನೆ ಮೊದಲು ಸಚಿನ್ ವಾಝೆಯ ಗುಣಗಾನ ಮಾಡುತ್ತದೆ ಮತ್ತು ಎಂಟು ದಿನಗಳಲ್ಲಿ ಈ ವಾಝೆ ಮುಖ್ಯ ಆರೋಪಿ ಆಗುತ್ತಾನೆ. ಈಗ ಮುಂದಿನ ಸರದಿ ಸಾರಿಗೆ ಮಂತ್ರಿ ಅನಿಲ್ ಪರಬ್ ಎಂದು ಕಿರೀಟ್ ಸೋಮಯ್ಯ ಎದೆ ತಟ್ಟಿ ಧೈರ್ಯದಿಂದ ಹೇಳಿದ ಕೇವಲ ಎರಡು ದಿನಗಳಲ್ಲೇ ವಾಝೆ ಅವರ ಲೆಟರ್ ಬಾಂಬ್ ಬಿತ್ತು.

ಪರಮಬೀರ್ ಸಿಂಗ್ ಅವರ ಲೆಟರ್ ಬಾಂಬ್ ಬಗ್ಗೆ ಸಿಬಿಐ ತನಿಖೆಗೆ, ಹೈಕೋರ್ಟ್ ಆದೇಶಿಸಿತು. ಮತ್ತು  ಎರಡು ದಿನದಲ್ಲೇ ಆ ಲೆಟರ್ ಬಾಂಬ್ ನಲ್ಲಿಯ ಸಂಗತಿಗಳಲ್ಲಿ ಸತ್ಯಾಂಶವಿಲ್ಲ ಎಂಬ ಮುಂಬಯಿ ಪೋಲಿಸ್ ಆಯುಕ್ತ ಹೇಮಂತ ನಗರಾಳೆ ಅವರ ಹೇಳಿಕೆ ಬಂತ್ತು. ಆದರೆ ಅಷ್ಟರವರೆಗೆ  ಅನಿಲ್ ದೇಶ್ ಮುಖ್  ತಮ್ಮ ಹುದ್ದೆಯನ್ನು ಕಳೆದುಕೊಂಡರು.

ಕ್ಯಾರೆಕ್ಟರ್ ಲೆಸ್ ವಾಝೆ ದೊಡ್ಡ-ದೊಡ್ಡ ಜನರಿಗೆ ಕ್ಯಾರೆಕ್ಟರ್ ಪ್ರಮಾಣಪತ್ರಗಳನ್ನು ಹಂಚುತ್ತಿದ್ದಾನೆ. ಅದೇ ಒಂದರಿಂದ 8, 9, 11 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಗಳಿಲ್ಲದೆ ಉತ್ತೀರ್ಣರಾಗುತ್ತಿದ್ದಾರೆ ಮತ್ತು ದೊಡ್ಡ-ದೊಡ್ಡ ರಾಜಕಾರಣಿಗಳು ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಮುಂಬರುವ 15 ದಿನಗಳಲ್ಲಿ ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಚಂದ್ರಕಾಂತ್ ಪಾಟೀಲ್ ಹೇಳುತ್ತಿದ್ದಾರೆ, ಇದರರ್ಥ ಒಳಗೆ ಸಾಕಷ್ಟು ಬೇಳೆ ಬೇಯುತ್ತಿದೆ.

ಇಲ್ಲಿ ಯಾರ ಮಾತು ನಿಜ ಎಂಬ ಪ್ರಶ್ನೆ ಕಾಡುತ್ತಿದ್ದು  ಆಮ್ಆದ್ಮಿ ಗೊಂದಲಕ್ಕೀಡ್ಡಾಗಿದ್ದಾನೆ. ನಡೆಯುತ್ತಿರುವ ತಮಾಷೆ ಖಂಡಿತವಾಗಿಯೂ ಒಳ್ಳೆಯದಲ್ಲ. ‘ಗೂಳಿಗಳ ಕಾದಾಟದಲ್ಲಿ ಹೊಲದ ನಾಶ’ ಎಂಬ ಮಾತಿದೆ. ಇದು ಪ್ರಸ್ತುತ ಮಹಾರಾಷ್ಟ್ರಕ್ಕೆ ಅನ್ವಯಿಸುತ್ತದೆ.

ರಾಜ್ಯ-ಕೇಂದ್ರದ ನಡುವೆ  ಕುಸ್ತಿ 

ರಾಜೇಶ್ ಟೋಪೆ ಮಾತು –ಮಾತಿಗೆ ಕೇಂದ್ರ ಸರ್ಕಾರ ಲಸಿಕೆಗಳನ್ನು ಪೂರೈಸುತ್ತಿಲ್ಲ ಎಂದು ಕೂಗುತ್ತಾರೆ. ಅದೇ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರಕ್ಕೆ ಕೇಂದ್ರವು ಹೆಚ್ಚಿನ ಲಸಿಕೆಗಳನ್ನು ನೀಡಿರುವ  ಅಂಕಿ-ಅಂಶಗಳನ್ನು ಪ್ರಸ್ತುತ ಪಡಿಸುತ್ತಾರೆ. ರೇಮೆಡಿಸ್ವಿರ್ ನ ಕಾಳಸಂತೆ ನಿಲ್ಲಿಸಬೇಕು ಎಂದು ಸಚಿವರು ಸಭೆಯಲ್ಲಿ ಹೇಳುತ್ತಾರೆ. ಕೇಂದ್ರ ಸರ್ಕಾರ ಅಗತ್ಯಕ್ಕೆ ತಕ್ಕ ಲಸಿಕೆಗಳನ್ನು ಪೂರೈಸುತ್ತಿಲ್ಲ ಎಂದು ರಾಜ್ಯ ಹೇಳಿಕೊಂಡರೆ, ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸರ್ಕಾರದ ದಾವೆಯಾಗಿದೆ. ಇಬ್ಬರಲ್ಲೂ  ಕುಸ್ತಿ ನಡೆದಿದೆ. ಶ್ರೀಸಾಮಾನ್ಯರ ಜೀವದೊಂದಿಗೆ ಆಟ ನಡೆದಿದೆ.

ಸ್ಟಾಕ್‌ಗಳ ಕೊರತೆಯಿಂದಾಗಿ ಮಹಾರಾಷ್ಟ್ರದಲ್ಲಿ ಲಸಿಕೆ ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಕೆಲವೆಡೆ ಕೋವಿಶೀಲ್ಡ್ ಇದ್ದರೆ ಕೋವ್ಯಾಕ್ಸಿನ್ ಇಲ್ಲ.ಕೇಂದ್ರರಾಜ್ಯ ಸಂಘರ್ಷದಲ್ಲಿ ಮಹಾರಾಷ್ಟ್ರದ ಬಲಿ ಆಗುತ್ತಿದೆಯೇ? ಬಿಜೆಪಿ ಆಢಳಿತ ರಹಿತ ರಾಜ್ಯಗಳಿಗೆ ಮಲತಾಯಿ ಧೋರಣೆ ನೀಡಲಾಗುತ್ತಿದೆ ಎಂಬ ಆರೋಪವನ್ನು ಖಂಡಿಸುವ ಜವಾಬ್ದಾರಿಯನ್ನು  ರಾಜ್ಯದ ಬಿಜೆಪಿ ನಾಯಕರು ತೆಗೆದುಕೊಳ್ಳಬೇಕು. ಲಸಿಕೆಗಳ ಪೂರೈಕೆಯಲ್ಲಿ  ಕೇಂದ್ರ ಸರಕಾರ  ಮಲತಾಯಿ ಧೋರಣೆ ನಡೆಸಿದ್ದರೆ ದೇಶದಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ಮಹಾರಾಷ್ಟ್ರದಲ್ಲಿ ಹೇಗೆ ನಡೆಯಿತು ಎಂಬುದಕ್ಕೆ ಉತ್ತರ ಕೂಡ ಸಿಗಬೇಕಾಗಿದೆ.

ಬರಗಾಲದಲ್ಲಿ  ಸಾಮಾನ್ಯ ಜನರ ಸೊಂಟ ಮುರಿಯುತ್ತದೆ .ಆದರೆ ವ್ಯವಸ್ಥೆಯಲ್ಲಿರುವರ ಪಾಲಿಗೆ ಜಾತ್ರೆ. ಈಗಲೂ,ಎಲ್ಲರಿಗೂ ಇಷ್ಟು ಕರೋನ ಹೇಗೆ ಎಂಬ ಪರಿಸ್ಥಿತಿ ಕಾಡುತ್ತಾ ಇದೆ. ಆರೋಗ್ಯ, ಲೋಕೋಪಯೋಗಿ, ಆಹಾರ ಮತ್ತು ಜೌಷಧ ಆಡಳಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕರೋನಾ ವರವಾಗಿ ಪರಿಣಮಿಸಿದೆ.ತನಿಖೆ ನಡೆಸಿದರೆ ದೊಡ್ಡ ಹಗರಣವೇ ಬಯಲಿಗೆ ಬರಬಹುದು. ಸಚಿವರು ಚ್ಯಾನೆಲ್ ಗಳಿಗೆ ಸಿಹಿ-ಸಿಹಿ ಬೈಟ್ ನೀಡುತ್ತಾರೆ ಆದರೆ ಅವರ ಖಾತೆಗೆ “ಡಯಾಬಿಟೀಸ್’ ಆಗಿದೆ ಎಂದು ಹೇಳುವವರಾರು? ಮುಂಬೈನ ನಾಯರ್ ಆಸ್ಪತ್ರೆಯಲ್ಲಿ  ರೋಗಿಯಿಂದ ತೆಗೆದುಕೊಳ್ಳಲಾದ  ಸ್ವ್ಯಾಬ್ 15 ನಿಮಿಷದ ಅಂತರದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯವನ್ನು ತಲುಪಲು ಎರಡು ದಿನಗಳ ಅವಧಿ ಯಾಕೆ  ಬೇಕು? ಕರೋನಾ ರಿಪೋರ್ಟ್ ಪಡೆಯಲು ತಗಲುವ ನಾಲ್ಕು ದಿನಗಳ ಸಮಯ, ಕರೋನಾ ಹರಡಲು ಒಂದು ದೊಡ್ಡ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಒಳ್ಳೆಯ ಸಂಗತಿಗಳು ನಡೆಯುತ್ತಿಲ್ಲ ಎಂದಲ್ಲ,ಆದರೆ ಬೇಡದವರು ಕೈ ತೊಳೆದುಕೊಳ್ಳುತಿದ್ದಾರೆ. ಸರ್ಕಾರಿ ವೈದ್ಯರ ‘ಕಟ್ ಪ್ರಾಕ್ಟೀಸ್’ ಭರದಿಂದ ಸಾಗಿದೆ. ಖಾಸಗಿ ಆಸ್ಪತ್ರೆಗಳ ಲೂಟಿ ನಿಲ್ಲದಂತಾಗಿದೆ.ಅದರ ಮೇಲೆ ಸರ್ಕಾರದ  ನಿಯಂತ್ರಿಣವಿಲ್ಲ.

ಜೀವ ಮುಖ್ಯವೋ ಅಥವಾ ಉಪ ಜೀವಕ್ಕೆಯೋ? ಜೀವ ಮುಖ್ಯವೋ ಅಥವಾ ಉಪ ಜೀವಕ್ಕೆಯೋ? ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎದುರಿರುವ ದೊಡ್ಡ ಸವಾಲಾಗಿದೆ. ಕೈಯಲ್ಲಿ ಹಣವಿದ್ದು ಸಾವು ಬಂದಲ್ಲಿ ತೊಂದರೆ ಇಲ್ಲ ಎಂದು ಲಾಕ್‌ಡೌನ್ ವಿರೋಧಿಸುವ ಒಂದು ದೊಡ್ಡ ವರ್ಗವೇ ಇದೆ. ಸರ್ಕಾರದ ಮೊದಲ ಜವಾಬ್ದಾರಿ ಜನರ ಪ್ರಾಣ ಉಳಿಸುವುದು. ಮುಖ್ಯಮಂತ್ರಿಗಳು ಅದಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಪತ್ನಿ, ಮಗ ಕರೊನಾ ಸೋಂಕಿನಿಂದ ಬಳಲುತಿದ್ದಾರೆ.ಇಂತಹ ಪರಿಸ್ಥಿಯಲ್ಲೂ  ಸಭೆಗಳನ್ನು ನಡೆಸುತ್ತಿದ್ದಾರೆ. ಇಂತಹ ಕಠಿಣ ಮತ್ತು ಆಹ್ವಾನಾತ್ಮಕ ಪರಿಸ್ಥಿಯನ್ನೂ ಎಲ್ಲರೂ ಒಟ್ಟಾಗಿ ಎದುರಿಸಬೇಕೆಂದು ರಾಜ್ಯದ ಅತ್ಯಂತ ಹಿರಿಯ ನಾಯಕ ಶರದ್ ಪವಾರ್ ಮನವಿ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಸೇರಿದಂತೆ ಎಲ್ಲರೂ ರಾಜ್ಯವನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ. ರಾಜಕೀಯವನ್ನು ಮೀರಿ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವ ನಾಯಕನಾಗಿ, ಇಂದು ಹೆಚ್ಚು ಪ್ರಭಾವ ಬೀರುವವನೇ ಜನರ ಮನಸ್ಸಿನಲ್ಲಿ ಮನೆ ಮಾಡಲಿದ್ದಾನೆ ಎಂದು ಹೇಳಲು ಯಾವುದೇ ಜೋತಿಷಿಯ ಅಗತ್ಯವಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button