Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತೆ ಕೊರೋನಾ ಸ್ಫೋಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟವಾಗಿದೆ. ದಿನಕ್ಕೆ ಕೇವಲ  4 -5 ಪಾಸಿಟಿವ್ ಬರುತ್ತಿದ್ದ ಜಿಲ್ಲೆಯಲ್ಲಿ ಇಂದು ಒದೇ ದಿನ 188 ಜನರಿಗೆ ಸೋಂಕು ಪತ್ತೆಯಾಗಿದೆ.

ಕೆಲವೇ ದಿನಗಳ ಹಿಂದೆ ಜೀರೋವರೆಗೂ ಇಳಿದಿತ್ತು. ಸರಾಸರಿ ತೆಗೆದರೂ 5 -6 ಕ್ಕೆ ಇಳಿದಿತ್ತು. ಆದರೆ ನಿನ್ನೆ 120 ಜನರಿಗೆ ಕಾಣಿಸಿಕೊಂಡಿದ್ದ ಸೋಂಕು ಇಂದು 188 ಜನರಿಗೆ ಪತ್ತೆಯಾಗಿದೆ. ಬೆಳಗಾವಿ ನಗರದಲ್ಲೇ 99 ಜನರಿಗೆ ಸೋಂಕು ಪತ್ತೆಯಾಗಿದೆ.

Home add -Advt

ಅಥಣಿ 17, ಬೈಲಹೊಂಗಲ 8, ಚಿಕ್ಕೋಡಿ 12, ಗೋಕಾಕ 16, ಹುಕ್ಕೇರಿ 4, ಖಾನಾಪುರ 9, ರಾಮದುರ್ಗ 4, ರಾಯಬಾಗ 14, ಸವದತ್ತಿ 3, ಇತರೆ 2 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 857 ಆಕ್ಟಿವ್ ಕೇಸ್ ಪತ್ತೆಯಾಗಿದೆ.

 

ಫೆಬ್ರವರಿ 22ರ ವರದಿ ಓದಿ –  ಸೋಮವಾರ ಹೊಸ ದಾಖಲೆ ಬರೆದ ಕೊರೋನಾ

ಧಾರ್ಮಿಕ ಆಚರಣೆ/ಸಮಾರಂಭ ನಿಷೇಧ: ಜಿಲ್ಲಾಧಿಕಾರಿ

Related Articles

Back to top button