ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಕೊರೋನ ನಿಯಂತ್ರಣಕ್ಕಾಗಿ ದೇಶ ಒಂದು ವರ್ಷದಿಂದ ಕಠಿಣ ಕ್ರಮ ಕೈಕೊಂಡರೂ ಇನ್ನೂ ಕೊರೋನದಿಂದ ಮುಕ್ತವಾಗಿಲ್ಲ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಜಿಲ್ಲೆಯ ಏಕೈಕ ಜಗದ್ಗುರು ಪೀಠವಾಗಿರುವ ನಿಡಸೋಸಿ ಶ್ರೀ ದುರದುಂಡೀಶ್ವರ ಮಠದಲ್ಲಿ ಈ ಕುರಿತು ಮಾತನಾಡಿದ ಅವರು, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ವಿಕೃತ ರೂಪ ಪಡೆಯುತ್ತಲಿದ್ದು, ಕೊರೋನ ನಿಯಂತ್ರಣಕ್ಕಾಗಿ ಸರಕಾರ ಹಲವು ರೀತಿಯ ಕ್ರಮಗಳನ್ನು ಜರುಗಿಸತ್ತಲಿದ್ದು, ಕೇವಲ ಸರಕಾರದಿಂದ ಕೊರೋನ ನಿಯಂತ್ರಣ ಸಾಧ್ಯವಾಗದು, ಸಾರ್ವಜನಿಕರು ಸಹ ಸರಕಾರದ ಕ್ರಮಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಕೊರೋನ ಒಬ್ಬ ವ್ಯಕ್ತಿಗೆ ಬಂದು ಹೋಗುವ ರೋಗವಲ್ಲ. ಕುಟುಂಬ ಸುತ್ತಲಿನ ಸಮಾಜಕ್ಕೂ ವ್ಯಾಪಿಸುವಂತಹದ್ದಾಗಿದೆ ಆದ್ದರಿಂದ ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಕೆಗೆ ಮುಂದಾಗಬೇಕೆಂದರು.
ಸರಕಾರದ ಆದೇಶದನ್ವಯ ಶ್ರೀಮಠದ ಪ್ರವೇಶವನ್ನು ಸಹ ನಿರ್ಬಂಧಿಸಲಾಗಿದ್ದು, ಶ್ರಿಮಠಕ್ಕೆ ಬರುವ ಭಕ್ತರು ಮನೆಯಲ್ಲಿಯೇ ಇದ್ದು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ನಾಲ್ಕು ಮಹಾದ್ವಾರಗಳನ್ನು ಬಂದ್ ಮಾಡಲಾಯಿತು. ಮೂರು ಶತಮಾನದ ಇತಿಹಾಸ ಹೊಂದಿರುವ ಶ್ರೀಮಠ ಕೊರೋನ ನಿಯಂತ್ರಣ ಸಲುವಾಗಿದೆ ಇದೇ ಎರಡನೇ ಬಾರಿಗೆ ತನ್ನ ದ್ವಾರಗಳನ್ನು ಬಂದ್ ಮಾಡಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ಸೆಮಿ ಲಾಕ್ ಡೌನ್ : ಕನ್ಫರ್ಮ್ ಮಾಡಿದ ಸರಕಾರ: ಇಲ್ಲಿದೆ ಸ್ಪಷ್ಟೀಕರಣ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ