Latest

ಸೋಂಕಿತರು ಆಸ್ಪತ್ರೆಗೆ ಬರಬೇಡಿ ಸಚಿವ ಸುಧಾಕರ್ ಮನವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯುಂಟಾಗುತ್ತಿದೆ. ಶೀಘದ್ರಲ್ಲಿ ಇದನ್ನು ಸರಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಎಂದಾಕ್ಷಣ ಭಯಪಟ್ಟು ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿಲ್ಲ. ಸೋಂಕು ಬಂದ ತಕ್ಷಣ ಗಂಭೀರ ಪರಿಸ್ಥಿತಿ ಎಂದು ಅನಗತ್ಯವಾಗಿ ಆಸ್ಪತ್ರೆಗಳಿಗೆ ಬರಬೇಡಿ. ಇದರಿಂದಗತ್ಯ ಸೋಂಕಿತರಿಗೆ ಆಕ್ಸಿಜನ್, ಐಸಿಯು, ಬೆಡ್ ವ್ಯವಸ್ಥೆ ಸಿಗುತ್ತಿಲ್ಲ. ಹೀಗಾಗಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುವಂತಾಗಿದೆ ಎಂದರು.

ಹೀಗಾಗಿ ದಯಮಾಡಿ ಸೋಂಕಿನ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ಬರುವ ಬದಲು ಮನೆಯಲ್ಲೇ ಐಸೋಲೇಟ್ ಆಗಿ, ಟೆಲಿಕಾಲಿಂಗ್ ಮೂಲಕ ವೈದ್ಯರನ್ನು ಸರ್ಪರ್ಕಿಸಿ ಅವರ ಮಾರ್ಗದರ್ಶನ ಪಡೆಯಿರಿ ಎಂದು ಹೇಳಿದರು.

ಭಾರತದಲ್ಲಿ ಈಗ ಕೊರೊನಾ 2ನೇ ಅಲೆ ಮಾತ್ರ ಇದೆ. ಇದು ಇನ್ನೂ 30-40 ದಿನಗಳ ವರೆಗೆ ಇರುತ್ತದೆ. ಆದರೆ ಬೇರೆ ದೇಶಗಳಲ್ಲಿ 3 ಮತ್ತು 4ನೇ ಅಲೆ ಕೂಡ ಆರಂಭವಾಗಿದೆ. ಹಾಗಾಗಿ ಜನರು ಜಾಗೃತರಾಗಿರಬೇಕು ಎಂದರು.
ಆಕ್ಸಿಜನ್ ಕೊರತೆಯಿಂದ ನಾಲ್ವರು ಸೋಂಕಿತರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button