
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ಹಾಗೂ ಮರಾಠಿ ವಿಭಾಗದ ವತಿಯಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಕರ್ನಲ್ ಪಿ.ವಿ. ರಾಮನಾಥಕರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೆಎಲ್‌ಎಸ್ ಸಂಸ್ಥೆ ಕಾರ್‍ಯದರ್ಶಿ ಎ.ಕೆ. ತಗಾರೆ, ಪ್ರಾಚಾರ್ಯ ಡಾ. ಎಚ್.ಎಚ್. ವೀರಾಪೂರ, ಡಾ. ಗೀತಾ ಚೌಗಲೆ ಉಪಸ್ಥಿತರಿದ್ದರು.