ಶೆಟ್ಟರ್ ಗೆ ಆಕ್ಸಿಜನ್, ಅಶ್ವತ್ಥನಾರಾಯಣಗೆ ರೆಮ್ ಡಿಸಿವರ್, ಬೊಮ್ಮಾಯಿ, ಅಶೋಕಗೆ ಬೆಡ್, ಲಿಂಬಾವಳಿಗೆ ವಾರ್ ರೂಂ

ಸಮರೋಪಾದಿಯಲ್ಲಿ ಕೊರೋನಾ ಕಾರ್ಯಾಚರಣೆಗಿಳಿದ ಸರಕಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ತನ್ಮೂಲಕ ಸರಕಾರ ಕೊರೋನಾ ವಿಷಯದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿದೆ.

ಇದರನ್ವಯ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಗೆ ಆಕ್ಸಿಜನ್ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಸರಕಾರದೊಂದಿಗೆ ಸಂಪರ್ಕ ಸಾಧಿಸಿ ರಾಜ್ಯಕ್ಕೆ ಅಗತ್ಯವಾದ ಆಕ್ಸಿಜನ್ ಪಡೆಯುವುದು, ಸ್ಥಳೀಯವಾಗಿ ಉತ್ಫಾದಕರೊಂದಿಗೆ ಸಂಪರ್ಕದಲ್ಲಿದ್ದು, ಸರಿಯಾಗಿ ಹಂಚಿಕೆ ಮಾಡುವುದು ಶೆಟ್ಟರ್ ಜವಾಬ್ದಾರಿ.

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣಗೆ ರೆಮ್ ಡಿಸಿವರ್ ಜವಾಬ್ದಾರಿ ವಹಿಸಲಾಗಿದೆ. ಔಷಧ ಕಂಪನಿಗಳು, ವಿತರಕರು, ಏಜಂಟರ ಜೊತೆ ಸಂಪರ್ಕದಲ್ಲಿದ್ದು ಅಗತ್ಯ ಪ್ರಮಾಣದಲ್ಲಿ ರೆಮ್ ಡಿಸಿವರ್ ಸರಬರಾಜು ಮಾಡುವ ಜವಾಬ್ದಾರಿ ಇವರದ್ದು. ವೈದ್ಯಕೀಯ ವಿಜ್ಞಾನ ಸಂಸ್ಥೆಗಳು, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳುವ ಜವಾಬ್ದಾರಿಯೂ ಅಶ್ವತ್ಥ ನಾರಾಯಣ ಅವರದ್ದು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಅಶೋಕಗೆ ಬೆಡ್ ಜವಾಬ್ದಾರಿ ವಹಿಸಲಾಗಿದೆ. ಖಾಸಗಿ, ಸರಕಾರಿ ಆಸ್ಪತ್ರೆಗಳು, ಕೋವಿಡ್ ಸಂಟರ್ ಗಳಲ್ಲಿ ಬೆಡ್ ವ್ಯವಸ್ಥೆ ಮಾಡಿವುದು. ಅದಕ್ಕೆ ಸರಿಯಾಗಿ ಆಕ್ಸಿಜನ್ ಸರಬರಾಜು ವ್ಯವಸ್ಥೆ ಮಾಡುವುದು ಇವರಿಬ್ಬರ ಜವಾಬ್ದಾರಿ.

ಅರಣ್ಯ ಹಾಗೂ ಕನ್ನಡ, ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿಗೆ ವಾರ್ ರೂಂ ಹಾಗೂ ಕಾಲ್ ಸೆಂಟರ್ ಜವಾಬ್ದಾರಿ ವಹಿಸಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button