Latest

18 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್ ; ನಾಳೆಯಿಂದಲೇ ಲಸಿಕೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಾಳೆಯಿಂದ (ಮೇ 10)  ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಮತ್ತು ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು  ಎಂದು ರಾಜ್ಯ ಸರ್ಕಾರ ತಿಳಿಸಿದೆ.
18 ರಿಂದ 44 ವಯಸ್ಸಿನ ನಡುವಿನ ಫಲಾನುಭವಿಗಳು ಆನ್ಲೈನ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಾವಣೆಯ ನಂತರ ತಮ್ಮ‌ ಮೊಬೈಲ್‌ ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ SMS ಸ್ವೀಕರಿಸಿರಬೇಕು.
ಕಟ್ಟುನಿಟ್ಟಿನ ಈ ಸಂದರ್ಭದಲ್ಲಿ ಫಲಾನುಭವಿಗಳು ಮೊಬೈಲ್‌ ನಲ್ಲಿ ಸ್ವಿಕರಿಸಿದ SMSನ್ನು ಪರಿಶೀಲಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

18 ವರ್ಷ ಮೇಲ್ಪಟ್ಟವರಿಗೆ ಆನ್ ಲೈನ್ ನೋಂದಣಿ ಆರಂಭ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button