ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕರೋನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅವರ ಚಿಕಿತ್ಸೆಗಾಗಿ ಹಾಸಿಗೆಗಳು, ಐಸೋಲೇಶನ್ ಕೇಂದ್ರಗಳು ಮತ್ತು ಅಕ್ಸೆಜೆನ್ ಕೊರತೆಯಿದೆ.
ಈ ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ ಬೆಳಗಾವಿಯ ಬಿಜೆಪಿ ಮುಖಂಡ ಮತ್ತು ಕರ್ನಾಟಕ ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ್ ಜಾಧವ್ ಅವರು ಕರ್ನಾಟಕದ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ಬೆಳಗಾವಿಯ ಆಟೋ ನಗರದಲ್ಲಿ KSTIDCL (ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್) ನ ವಿಶಾಲವಾದ 35,000 ರಿಂದ 40,000 ಚದರ್ ಅಡಿಗಳ ಸಭಾಂಗಣ ಖಾಲಿ ಇದ್ದು ಅಲ್ಲಿ ಸುತ್ತಮುತ್ತಲೂ ದೊಡ್ಡ ಸಂಖ್ಯೆಯಲ್ಲಿ ಗಿಡ ಮರಗಳು ಇರುವುದರಿಂದ ಅಲ್ಲಿ ಐಸೋಲೇಶನ್ ಕೇಂದ್ರವನ್ನು ಪ್ರಾರಂಭಿಸಬೇಕು. ಅಲ್ಲಿರುವ ಗಿಡ ಮರಗಳಿಂದ ರೋಗಿಗಳು ಶುದ್ಧ ಅಕ್ಸೆಜೆನ್ ಪಡೆಯುತ್ತಾರೆ ಮತ್ತು ಶೀಘ್ರವಾಗಿ ಗುಣಮುಖರಾಗುತ್ತಾರೆ ಹಾಗೂ ರೋಗಿಗಳಿಗೆ ಉತ್ತಮ ವ್ಯವಸ್ಥೆ ಆಗುತ್ತದೆ ಂದು ಅವರು ತಿಳಿಸಿದ್ದಾರೆ.
ಈ ಮನವಿಯನ್ನು ಸ್ವೀಕರಿಸಿದ ಜಗದೀಶ್ ಶೆಟ್ಟರ್ ಅವರು ಶೀಘ್ರದಲ್ಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು ಎಂದು ಕಿರಣ ಜಾಧವ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್ ; ನಾಳೆಯಿಂದಲೇ ಲಸಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ