ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ 2ನೇ ಅಲೆ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕೊರೊನಾ ಸೋಂಕಿತರಲ್ಲಿ ’ಬ್ಲ್ಯಾಕ್ ಫಂಗಸ್’ ಅಥವಾ ‘ಮುಕರೋ ಮೈಕೋಸಿಸ್ ಫಂಗಸ್’ ಪತ್ತೆಯಾಗುತ್ತಿದೆ.
ಈ ಬಗ್ಗೆ ಸ್ವತ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಕೊರೊನಾ ಸೋಂಕು ನಿವಾರಣೆಯಾದರಲ್ಲಿ ಈ ಫಂಗಸ್ ಪತ್ತೆಯಾಗುತ್ತಿದೆ. ಹಾಗಾಗಿ ಕೊರೊನಾ ಸೋಂಕಿತರು ಅತಿಯಾದ ಸ್ಟಿರಾಯ್ಡ್, ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಸೇವಿಸದಿರುವುದು ಉತ್ತಮ. ಶುಗರ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಬ್ಲ್ಯಾಕ್ ಫಂಗಸ್ ಲಕ್ಷಣದಲ್ಲಿ ಪ್ರಮುಖವಾಗಿ ಸೋಂಕಿತರಲ್ಲಿ ಅತಿಯಾದ ತಲೆ ನೋವು, ಕಣ್ಣಿನ ಸುತ್ತ ನೋವು, ಕಣ್ಣೀರಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂಥಹ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ENT/ನ್ಯೂರೋ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ. ಬ್ಲ್ಯಾಕ್ ಫಂಗಸ್ ನಿಂದ ದೃಷ್ಟಿಯನ್ನೇ ಕಳೆದುಕೊಳ್ಳಬಹುದಾದ ಅಪಾಯ ಹೆಚ್ಚಿದೆ ಮಾತ್ರವಲ್ಲ ಬ್ರೇನ್ ಡ್ಯಾಮೇಜ್, ಸಾವು ಕೂಡ ಸಂಭವಿಸುವ ಸಾಧ್ಯತೆಯಿರುತ್ತದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಕೂಡ ಇಂತಹ 35 ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ ಗುಜರಾತ್, ಮಾಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಕೋವಿಡ್ ಪತ್ತೆಯಾಗಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ