ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಜಾಂಬೋಟಿ ಭಾಗದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿರುವ ಕೋವಿಡ್ ಕರ್ತವ್ಯ ನಿರತ ಸೆಕ್ಟರ್ ಅಧಿಕಾರಿಯೊಬ್ಬರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಮೂವರು ಗ್ರಾಮ ಪಂಚಾಯ್ತಿ ಸದಸ್ಯರಿಗೆ ದಂಡ ವಿಧಿಸಿ ಅವರಿಂದ ತಲಾ ರೂ.100 ದಂಡವನ್ನು ವಸೂಲು ಮಾಡಿದ್ದಾರೆ.
ತಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ದಂಡ ವಿಧಿಸಿದ ಬಳಿಕ ಎಚ್ಚೆತ್ತ ಇಡೀ ಗ್ರಾಮಸ್ಥರು ಇನ್ಮುಂದೆ ತಮ್ಮ ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದಾಗಿ ಸೆಕ್ಟರ್
ಅಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದಾರೆ.
ಮಂಗಳವಾರ ಇಡೀ ತಾಲ್ಲೂಕಿನಲ್ಲಿ ಸೆಕ್ಟರ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯನ್ನು
ನಡೆಸಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದೇ
ಸಂಚರಿಸುತ್ತಿದ್ದ ಒಟ್ಟು 600ಕ್ಕೂ ಹೆಚ್ಚು ಗ್ರಾಮಸ್ಥರಿಗೆ ದಂಡ ವಿಧಿಸಿ ಗ್ರಾಮೀಣ
ಭಾಗದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಗ್ರಾಮಸ್ಥರು ಮಾಸ್ಕ್ ಧರಿಸುತ್ತಿಲ್ಲ ಮತ್ತು ಸಾಮಾಜಿಕ
ಅಂತರ ಪಾಲಿಸುತ್ತಿಲ್ಲ ಎಂಬ ದೂರಿನನ್ವಯ ಕಾರ್ಯಪ್ರವೃತ್ತರಾದ ತಾಲ್ಲೂಕಿನ ಎಲ್ಲ 51
ಗ್ರಾಮ ಪಂಚಾಯ್ತಿಗಳ ಸೆಕ್ಟರ್ ಅಧಿಕಾರಿಗಳು ಆಯಾ ಗ್ರಾಮ ಪಂಚಾಯ್ತಿಗಳ ಪಿಡಿಒಗಳು
ಮತ್ತು ಸಿಬ್ಬಂದಿಯೊಂದಿಗೆ ಗ್ರಾಮಗಳಲ್ಲಿ ಸಂಚರಿಸಿ ಅನಿರೀಕ್ಷಿತ ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಗೃಹ ನಿರ್ಮಾಣ, ಕೃಷಿ ಹಾಗೂ ಕೂಲಿ ಕೆಲಸಗಳಲ್ಲಿ ನಿರತ
ಜನರು ಪರಸ್ಪರ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಮತ್ತು ಕೆಲ ಹಳ್ಳಿಗಳಲ್ಲಿ ನಿಗದಿತ
ಸಮಯ ಮೀರಿ ಅಂಗಡಿಗಳನ್ನು ತೆರೆದಿಟ್ಟು ವ್ಯಾಪಾರ-ವಹಿವಾಟು ನಡೆಸುತ್ತಿದ್ದ ವರ್ತಕರಿಗೆ
ಇನ್ಮುಂದೆ ಈ ರೀತಿ ಮಾಡದಂತೆ ಸೆಕ್ಟರ್ ಅಧಿಕಾರಿಗಳು ತಿಳುವಳಿಕೆ ನೀಡಿದ್ದಾರೆ.

ಕಾರ್ಯಾಚರಣೆಯ ಸಂದರ್ಭಲ್ಲಿ ಮಾಸ್ಕ್ ಧರಿಸದೇ ಹಳ್ಳಿಗಳ ಶಾಲೆಗಳು ಮತ್ತು ಸಾರ್ವಜನಿಕ
ಸ್ಥಳಗಳಲ್ಲಿ ಕುಳಿತಿದ್ದ ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
ಕೆಲ ಗ್ರಾಮಗಳಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ
ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಏಕಾ ಏಕಿ ಗ್ರಾಮಗಳಲ್ಲಿ ಬಂದು ಗ್ರಾಮಸ್ಥರಿಗೆ
ದಂಡ ವಿಧಿಸಿರುವುದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲವರು ಅಧಿಕಾರಿಗಳ ಈ ನಡೆಯನ್ನು ಕ್ಷೇತ್ರದ ರಾಜಕೀಯ ಮುಖಂಡರ ಗಮನಕ್ಕೂ ತಂದಿದ್ದಾರೆ.
ಆದರೆ ಅಧಿಕಾರಿಗಳು ಮಾತ್ರ ಯಾವುದೇ ಒತ್ತಡಗಳಿಗೆ ಜಗ್ಗದೇ ಕಾರ್ಯಾಚರಣೆಯನ್ನು
ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ