Kannada NewsKarnataka NewsLatest

​ ಜನತೆಯ ಸೇವೆಗಾಗಿ 2 ಅಂಬುಲೆನ್ಸ್ ಅರ್ಪಿಸಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ​ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈ ಸಂದರ್ಭದಲ್ಲಿ ಜನತೆಯ ಸೇವೆಗೊಸ್ಕರ 2 ಅಂಬುಲೆನ್ಸ್ ಗಳನ್ನು ಸಮರ್ಪಿಸಿದರು.
ಕೊರೋನಾದಿಂದಾಗಿ ಜನರು ಎಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವ ಅರಿವಿದೆ. ಕೊರೋನಾದಿಂದಾಗಿ ನಾನು ಕೂಡ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ. ಆದಷ್ಟು ಬೇಗ ಇಂತಹ ಪರಿಸ್ಥಿತಿಯಿಂದ ಎಲ್ಲರೂ ಪಾರಾಗಲಿ ಎಂದ ಲಕ್ಷ್ಮಿ ಹೆಬ್ಬಾಳಕರ್, ಗ್ರಾಮೀಣ ಕ್ಷೇತ್ರದ ಜನರು ಪಕ್ಷಾತೀತವಾಗಿ ಈ ಎರಡು ಅಂಬುಲೆನ್ಸ್ ಗಳನ್ನು ಇಂದಿನಿಂದಲೇ ಬಳಸಿಕೊಳ್ಳಬೇಕು ಎಂದು ವಿನಂತಿಸಿದರು.
​ ದಿನನಿತ್ಯ ಕ್ಷೇತ್ರದ ಜನರು ಬೆಡ್ ಗಾಗಿ, ಇಂಜಕ್ಷನ್ ಗಾಗಿ, ಆಕ್ಸಿಜನ್ ಗಾಗಿ ಪೋನ್ ಮಾಡುತ್ತಿದ್ದಾರೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನನ್ನ ಕೈಯಿಂದ ಸಾಧ್ಯವಾದಷ್ಟು ನೆರವನ್ನು ನೀಡುತ್ತಿದ್ದೇನೆ. ಎಲ್ಲರೂ ಆದಷ್ಟು ಜಾಗೃತಿಯಿಂದ ಇರಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
​ ಸಿ.ಸಿ. ಪಾಟೀಲ, ರಾಮನಗೌಡ ಪಾಟೀಲ, ಶ್ರೀಕಾಂತ್ ಮಾದುಬರಬಣ್ಣವರ, ಬಸನಗೌಡ ಪಾಟೀಲ್, ಶಾಮ್ ಮುತ್ಗೇಕರ್, ಬಾಗನ್ನಾ ನರೋಟಿ, ಗಜಾನನ ಕಣಬರ್ಕರ, ಜೈವಂತ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button